ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಾಲ ನೀಡದ ಕುರಿತು ಅಂಗಡಿಯಲ್ಲಿ ಹೀಗೊಂದು ಭಿತ್ತಿಪತ್ರ

Rashmi Kasaragodu
Updated On : 15 Aug 2013, 12:27 pm

ಹೊಳೆನರಸೀಪುರ: ಸಾಲ ಮಾಡುವ ಕುರಿತಂತೆ ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎನ್ನುವ ಲೇಟೆಸ್ಟ್ ಹಾಡೊಂದಿದೆ. ಆದರೆ ಯಾವುದೇ ಅಂಗಡಿಗಳಲ್ಲಿ ನೋಡಿದರೂ ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎಂಬ ಬೋರ್ಡ್ ತೂಗು ಹಾಕಿರುತ್ತಾರೆ. ಆದರೂ ಜನ ಸಾಲ ಕೇಳೋದು ಬಿಡಲ್ಲ- ಅಂಗಡಿಯವರು ಸಾಲ ಕೊಡೊಲ್ಲ ಅನ್ನೋದನ್ನೂ ಬಿಡಲ್ಲ.
ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೇ... ಪಟ್ಟಣದ ಪೇಟೆ ಬೀದಿಯಲ್ಲಿನ ವೆಂಕಟೇಶ್ವರ ಎಂಟರ್‌ಪ್ರೈಸಸ್ ಅಂಗಡಿ ಮಾಲೀಕ ಪ್ರಸನ್ನಕುಮಾರ್ ಸಾಲ ಏಕೆ ಕೊಡೋದಿಲ್ಲ ಎನ್ನುವ ಕುರಿತಂತೆ ಒಂದು ಭಿತ್ತಿ ಪತ್ರವನ್ನೇ ತಮ್ಮ ಅಂಗಡಿಯಲ್ಲಿ ಎಲ್ಲರ ಕಣ್ಣಿಗೆ ಕಾಣುವಂತೆ ತೂಗು ಹಾಕಿದ್ದಾರೆ.
ಅದರ ಸಾರಾಂಶ ಹೀಗಿದೆ- ಸಾಲ ಯಾಕೆ ಕೊಡೋದಿಲ್ಲಾ ಅಂದ್ರೇ... ಬರೆದಿಟ್ಟುಕೊಳ್ಳಿ.. ಆಮೇಲೆ ಕೊಡ್ತೀನಿ... ಈಗ ತಂದು ಕೊಡ್ತೀನಿ... ಕಳಿಸಿ ಕೊಡ್ತೀನಿ... ಬಂದು ತಗೊಂಡು ಹೋಗಿ... ಅಷ್ಟೂ ನಂಬಿಕೆ ಇಲ್ವಾ... ನಾಳೆ ಕೊಡ್ತೀನಿ... ಓಡಿ ಹೋಗ್ತೀನಾ... ಸಂಬಳ ಇನ್ನೂ ಆಗಿಲ್ಲ... ಮನೇಲಿ ಮದುವೆ ಇದೆ... ಅಮ್ಮನಿಗೆ ಹುಷಾರಿಲ್ಲ... ಇವತ್ತು ಬ್ಯಾಂಕಿಗೆ ರಜಾ... ಇಷ್ಟೆಲ್ಲಾ ಆದ್ಮೇಲೆ ಕೊನೆಗೆ, ಏನ್ಮಾಡ್ಕೋತೀಯಾ ಮಾಡ್ಕೋ ಹೋಗೊಲೋ..  ಇದೆಲ್ಲಾ ಬೇಕಾ ನಮಗೆ. ಈ ಎಲ್ಲಾ ಕಾರಣಗಳಿಂದ ನಾವು ಸಾಲ ಕೊಡುವುದಿಲ್ಲ ದಯವಿಟ್ಟು ಸಹಕರಿಸಿ ಎಂದು ಬರೆಯಲಾಗಿದೆ. ಅನಿವಾರ್ಯತೆಯಲ್ಲಿಯೋ.. ಬೇಕಂತಲೋ.. ದುಡ್ಡಿದ್ದೂ ಹಣ ಖರ್ಚು ಮಾಡದೆ ಸಾಲ ಕೇಳುವವರು ಈ ಭಿತ್ತಿಪತ್ರವನ್ನು ಕಂಡು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಬಾಯಿ ತೆರೆಯದೇ ಹಿಂದಿರುಗುವ ಹಲವಾರು ನಿದರ್ಶನ ಕಂಡು ಅಂಗಡಿಯ ಮಾಲೀಕರಿಗೆ ಒಂದು ರೀತಿಯಲ್ಲಿ ಸಂತೋಷ ಮತ್ತು ನೆಮ್ಮದಿ ಉಂಟಾಗಿದೆಯಂತೆ. ಈಗ ಹೇಳಿ ಸಾಲ ಮಾಡಿ ತುಪ್ಪ ತಿನ್ನಬೇಕಾ.. ಇಲ್ಲಾ ಸಾಲ ಕೊಟ್ಟು ಬೆರಳು ನೆಕ್ಕಬೇಕಾ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement