ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಹಾರ ಇಲಾಖೆ ಸಿಬ್ಬಂದಿ, ಪೊಲೀಸ್ ಜಂಟಿ ದಾಳಿ: ಅಕ್ರಮ ಅಕ್ಕಿ ವಶ

Rashmi Kasaragodu
Updated On : 16 Aug 2013, 12:37 pm

ಹಾಸನ: ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸರು ಗುರುವಾರ ಜಂಟಿ ದಾಳಿ ನಡೆಸಿ ವಶಡಿಸಿಕೊಂಡಿದ್ದಾರೆ. ನಗರದ ಸಂತೆಪೇಟೆಯಲ್ಲಿ ಇರುವ ಶ್ರೀಗುರು ರೈಸ್ಮಿಲ್ನಲ್ಲಿ ಅಕ್ರಮವಾಗಿ ಸುಮಾರು 250 ರಿಂದ 300 ಕ್ವಿಂ. ಅಕ್ಕಿಯನ್ನು ಯಾವುದೇ ದಾಖಲೆಗಳು ಇಲ್ಲದೆ ದಾಸ್ತಾನು ಮಾಡುತ್ತಿರುವ ಬಗ್ಗೆ ಬಂದ ದೂರಿನ ಆಧಾರದ ಮೇಲೆ ಜಿಲ್ಲಾ ಆಹಾರ ಮತ್ತು ನಾಗರೀಕ ಸಮಾಜ ಇಲಾಖೆಯ ಅಧಿಕಾರಿ ಡಾ.ರಾಮೇಶ್ವರಪ್ಪ ಹಾಗೂ ಪೆನ್ಷ್ನ್ ಮೊಹಲ್ಲಾ ಪೊಲೀಸ್ ಠಾಣೆ ಎಸ್ಐ ಮೋಹನಕುಮಾರ್ ಇತರರು ದಾಳಿ ನಡೆಸಿದರು. ಸಿಬ್ಬಂದಿ ಪರಾರಿ: ಅಧಿಕಾರಿಗಳ ತಂಡ  ಅಲ್ಲಿ ಇದ್ದಂತಹ ಅಕ್ಕಿಯನ್ನು ಪರಿಶೀಲಿಸಿದರು. ಇದು ಪಡಿತರ ವ್ಯವಸ್ಥೆಯ ರೀತಿಯ ಅಕ್ಕಿಯಂತೆ ಇರುವುದರಿಂದ ಇದನ್ನು ಪರಿಶೀಲಿಸಲಾಗುತ್ತದೆ. ಅಲ್ಲದೆ ಈ ಅಕ್ಕಿ ದಾಸ್ತಾನಿಗೆ ಯಾವುದೇ ಪರವಾನಗಿ ನೀಡಿಲ್ಲ. ಹಾಗೂ ಅಧಿಕಾರಿಗಳು ದಾಳಿ ನಡೆಸುತ್ತಿದ್ದ ವೇಳೆ ಅಲ್ಲಿ ಇದ್ದಂತಹ ಸುಮಾರು 10ರಿಂದ 15 ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ರೈಸ್ಮಿಲ್ ಮಾಲೀಕ ಕೃಷ್ಣರನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಅಕ್ರಮವಾಗಿ ಅಕ್ಕಿಯನ್ನು ದಾಸ್ತಾನು ಮಾಡಿಕೊಂಡಿರುವ ಬಗ್ಗೆ ಬಂದ ದೂರಿನ ಮೇರೆಗೆ ಪೊಲೀಸರೊಂದಿಗೆ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಇಲ್ಲಿದ್ದ ಸಿಬ್ಬಂದಿ ಪರಾರಿಯಾಗಿದ್ದಾರೆ. ಇದರಿಂದ ಈ ಅಕ್ಕಿ ದಾಸ್ತಾನು ಅನುಮಾನ ಉಂಟಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement