ಎಸ್ಡಿಎಂನಲ್ಲಿ ಸ್ವಾತಂತ್ರ್ಯೋತ್ಸವ
ಹಾಸನ: ನಗರದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಗುರುವಾರ 67ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವಿಜಯ ಬ್ಯಾಂಕಿನ ವ್ಯವಸ್ಥಾಪಕಿ ನಳಿನ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ಆಚರಿಸುವ ಮಹತ್ವ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಿಸಲು ವೈದ್ಯರ ಪಾತ್ರದ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಆಡಳಿತ ವಿಭಾಗದ ಡೀನ್ ಡಾ.ಟಿ.ಬಿ.ತ್ರಿಪಾಠಿ ಮಾತನಾಡಿ, ರಾಷ್ಟ್ರೀಯ ಏಕೀಕರಣದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಎನ್ಎಸ್ಎಸ್ ಸಂಯೋಜಕ ಪ್ರೊ.ಎಂ.ಎನ್. ಪಾಂಡುರಂಗ ಇದ್ದರು. ಅನಿರುದ್ ಸಹರಾ, ಅಮೃತಗೌರಿ ಮತ್ತು ವಿದ್ಯಾರ್ಥಿಗಳು ಸ್ವಾತಂತ್ರ್ಯದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ಪಿ. ಹೇಮಂತಕುಮಾರ್ ಸ್ವಾಗತಿಸಿದರು. ಸ್ವಾತಿ ಸೋಮಯಾಜಿ ಮಾತನಾಡಿದರು. ನಾರಾಯಣನ್ ಮೂಸ್, ವಿನಯಾಯಾಜಿ, ಡಾ.ವೈಷ್ಣವಿ, ಡಾ.ಉಮ್ಮರ್ ಫಾರೂಕ್ ಸಂಸ್ಥೆಯ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು. ಅಧ್ಯಕ್ಷತೆ ವಹಿಸಿದ್ದ ಡಾ. ಟಿ.ಬಿ. ತ್ರಿಪಾಠಿ ಮಾತನಾಡಿದರು. ಪ್ರೊ. ಪಾಂಡುರಂಗ, ಅನಿರುದ್ಧ, ಅಮೃತಗೌರಿ ಇತರರು ಇದ್ದರು.