ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೆಲ, ಜಲ ಸಂರಕ್ಷಣೆಯ ಜವಾಬ್ದಾರಿ ಯುವಕರದ್ದು: ಶ್ರೀವಿದ್ಯಾ

Rashmi Kasaragodu
Updated On : 16 Aug 2013, 12:36 pm

ಸಕಲೇಶಪುರ: ನೆಲ, ಜಲ ಸಂರಕ್ಷಣೆಯ ಮಹತ್ವದ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ಎಂದು ಉಪವಿಭಾಗಾಧಿಕಾರಿ ಶ್ರೀವಿದ್ಯಾ ಹೇಳಿದರು. ಗುರುವಾರ ಪಟ್ಟಣದ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿಯ ಭರದಲ್ಲಿ ದೇಶ ವಿನಾಶದೆಡೆ ಸಾಗುತ್ತಿದೆ. ಆದ್ದರಿಂದ ಇಂದಿನ ಯುವ ಜನಾಂಗ ಪ್ರಕೃತಿ ರಕ್ಷಣೆಗೆ ಹೆಚ್ಚಿನ ಅದ್ಯತೆ ನೀಡಬೇಕು ಎಂದರು. ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಬಡತನ, ದಾರಿದ್ರ್ಯ ಹಾಗೂ ನಿರದ್ಯೋಗ ಸಮಸ್ಯೆ ಸಂಪೂರ್ಣ ತೊಲಗಿದಾಗಲೇ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ದೊರಕುತ್ತದೆಎಂದು ಹೇಳಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಬತ್ತದ ಬೆಳೆಯಲ್ಲಿ ಅಧಿಕ ಇಳುವರಿ ಪಡೆದ  ಎನ್.ಸಿ ಜಗದೀಶ್, ಭಾಗ್ಯ ಹಾಗೂ ಎಂ.ಇ ಪಾಪಣ್ಣ ಹಾಗೂ ನಿವೃತ್ತ ದೈಹಿಕ ಶಿಕ್ಷಕ ಹುಚ್ಚೆಗೌಡ ಅವರನ್ನು ಸನ್ಮಾನಿಸಲಾಯಿತು.  ತಾಲೂಕು ಪಂಚಾಯ್ತಿ ಅಧ್ಯಕ್ಷೆ ಸುಮಂಗಲಿ, ಉಪಾಧ್ಯಕ್ಷೆ ವೇದಾವತಿ, ತಹಸೀಲ್ದಾರ್ ಬಾಬುದೇವಾಡಿಗ, ಇಓ ಸಿದ್ದರಾಜು, ಎ.ಆರ್.ಟಿ.ಓ ಕೇಶವಧರಣಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement