ಪ್ರಸಾದಿಹಳ್ಳಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ
ಕನ್ನಡಪ್ರಭ ವಾರ್ತೆ ಬೇಲೂರು ಆ.15
ತಾಲೂಕಿನ ಪ್ರಸಾದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 67 ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ನಾರಾಯಣ್ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತವಾಗಿ ವಿವಿಧ ಕಲಿಕಾ ಸಾಮಾಗ್ರಿ ನೀಡಲಾಗುತ್ತಿದೆ ಎಂದರು.
ಎಸ್ಡಿಎಂಸಿ ಸದಸ್ಯ ಕುಮಾರ್ಕುಮಾರ್, ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಪೆನ್ನು, ಚಂದ್ರು ಅವರು 100 ಟೈ ಮತ್ತು ಬ್ಯಾಡ್ಜ್, ಕವಿತಾ, ಯಶೋಧ, ಶಾಂತಾ, ರತ್ನ ಅವರು ಅಕ್ಷರ ದಾಸೋಹಕ್ಕೆ 3 ಸಾವಿರ ರು ಬೆಲೆಯ ಮಿಕ್ಸರ್ ಕೊಡುಗೆಯಾಗಿ ನೀಡಿದರು.
ಧರ್ಮೇಗೌಡ ಬಹುಮಾನ ನೀಡಿದರು. ಮುಖ್ಯ ಶಿಕ್ಷಕ ರೆಹಮತ್ ಸ್ವಾಗತಿಸಿದರು. ಸಹ ಶಿಕ್ಷಕಿ ರೇಣುಕಾ ನಿರೂಪಿಸಿದರು. ಮಂಜುನಾಥ್ ವಂದಿಸಿದರು.