ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಕನ್ನಡಪ್ರಭ ವಾರ್ತೆ ಹಾಸನ ಆ. 15
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಅಧ್ಯಾಪಕರು ಕಾಲೇಜಿನ ಆವರಣವನ್ನು ಶ್ರಮದಾನ ಮಾಡಲಾಯಿತು. ಪ್ರಾಂಶುಪಾಲ ಪ್ರೊ. ರೂಪ್ರಾಜಚಂದ್ರ ಮಾತನಾಡಿ, ಮಹಾತ್ಮಗಾಂಧೀಜಿ ತತ್ವ ಆದರ್ಶ ಪಾಲಿಸುವಲ್ಲಿ ನಾವುಗಳಿಂದು ವಿಫಲರಾಗುತ್ತಿದ್ದೇವೆ. ಗಾಂಧೀಜಿಯನ್ನು ವರ್ಷಕ್ಕೆ ಒಮ್ಮೆ ಸ್ಮರಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದರು. ಗಾಂಧೀ ಅವರ ಒಂದು ಮಾತಿಗೆ ಇಡೀ ದೇಶದ ಜನರೇ ಹೋರಾಟಕ್ಕೆ ಮುಂದಾಗುತ್ತಿದ್ದರು. ಆದರೆ ಇಂತಹ ರಾಷ್ಟ್ರಪಿತರನ್ನು ಮತ್ತೊಮ್ಮೆ ಕಾಣಲು ಸಾಧ್ಯವಾಗುವುದಿಲ್ಲ ಎಂದು ನುಡಿದರು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಅಧ್ಯಾಪಕರು ಒಂದು ಗಂಟೆ ಕಾಲ ಶ್ರಮದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೂಡಿಸಿದರು. ಅಧ್ಯಾಪಕ ಪ್ರೊ. ಮೋಹನ್ಕುಮಾರ್, ಪ್ರೊ. ಲೋಕಪ್ಪಗೌಡ, ಪ್ರೊ. ಸಾವಿತ್ರಿ, ಡಾ. ಕೆ.ಜಿ. ಕವಿತಾ, ಪ್ರೊ. ಸುಲೋಚನಾ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ. ಕೆ. ಗುರುರಾಜ್, ಎನ್ಎಸ್ಎಸ್ ಅಧಿಕಾರಿ ಎಂ.ಕೆ. ಮಹೇಶ್, ಉಪನ್ಯಾಸಕ ದಿಲೀಪ್ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎ. ಪ್ರಕಾಶ್, ಐಕ್ಯೂಎಸಿ ಸಂಚಾಲಕ ಪ್ರೊ. ಕೆ.ಡಿ. ಮುರಳೀಧರ್ ಇತರರು ಇದ್ದರು.