ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ಲೋಕಾಯುಕ್ತ ಎಸ್ಪಿ ಪ್ರವಾಸ

Rashmi Kasaragodu
Updated On : 17 Aug 2013, 12:39 pm

ಹಾಸನ: ಲೋಕಾಯುಕ್ತ ಪೊಲೀಸ್ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಸಿಬ್ಬಂದಿ ಆ.17ರಂದು ಚನ್ನರಾಯಪಟ್ಟಣ ಹಾಗೂ ಬೇಲೂರು ತಾಲೂಕಿಗೆ ಭೇಟಿ ನೀಡಲಿದ್ದು, ಭೇಟಿ ಸಮಯದಲ್ಲಿ ಚನ್ನರಾಯಪಟ್ಟಣ  ಹಾಗೂ ಬೇಲೂರಿನ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಸಾರ್ವಜನಿಕರು ತಮ್ಮ ಮನವಿಗಳನ್ನು ಸಲ್ಲಿಸಬಹುದಾಗಿದೆ.
ವಿದ್ಯುತ್ ವ್ಯತ್ಯಯ
ಹಾಸನ: ಆ.19 ರಂದು ತುರ್ತು ಕಾರ್ಯ ನಿಮಿತ್ತ ಹಾಸನ ನಗರದ ತಣ್ಣೀರುಹಳ್ಳ, ಹಳೇ ಬಸ್ ನಿಲ್ದಾಣ ಸುತ್ತ ಮುತ್ತ, ಸಂತೆಪೇಟೆ, ಪೆನ್ಷನ್ ಮೊಹಲ್ಲಾ, ವಿಜಯನಗರ, ಹನುಮಂತಪುರ, ಗೊರೂರು, ಇತ್ಯಾದಿ ಸ್ಥಳಗಳಲ್ಲಿ ಹಾಗೂ ಅರಕಲಗೂಡು ತಾ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಆದುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದು ವಿದ್ಯುತ್ ಪ್ರಸರಣಾ ನಿಗಮ, ಟಿಎಲ್ ಹಾಗೂ ಎಸ್ಎಸ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.
ಜೂಜಾಟ: 9 ಬಂಧನ
ಅರಕಲಗೂಡು: ಅಕ್ರಮವಾಗಿ ಜೂಜಾಡುತ್ತಿದ್ದ 9 ಜನರನ್ನು ಬಂಧಿಸಿರುವ ಘಟನೆ ತಾಲೂಕಿನ ಕೊಣನೂರಿನಲ್ಲಿ ಗುರುವಾರ ನಡೆದಿದೆ. ತಾಲ್ಲೂಕಿನ ರಾಮನಾಥಪುರ ಹೋಬಳಿ, ಬಸವನಹಳ್ಳಿ ಕೊಪ್ಪಲು ಕಟ್ಟೇಪುರ ಚಾನಲ್ ಹತ್ತಿರ ಜೂಜಾಡುತ್ತಿದ್ದ ಬಸವನಹಳ್ಳಿ ಕೊಪ್ಪಲಿನ ಸುರೇಶ  (39), ಪ್ರಕಾಶ (38), ರಾಜೇಶ್ (37), ಮಹೇಶ (32), ಅಮಾಸೇಗೌಡ (40), ಗೋವಿಂದ (28), ತಿಮ್ಮನಾಯಕ (60), ಕೇರಳಾಪುರದ ಶಿವಕುಮಾರ (60) ಮತ್ತು ಬಸವನಹಳ್ಳಿಯ ದಿನೇಶ (40) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 6870 ರು. ನಗದು 9 ನಾನಾ ಕಂಪನಿಯ ಮೊಬೈಲ್ಗಳನ್ನು ವಶಪಡಿಸಿಕೊಂಡು, ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ವ್ಯಕ್ತಿ ಬಂಧನ
ಅರಕಲಗೂಡು: ಅಕ್ರಮವಾಗಿ ಮದ್ಯ ಸಾಗಿಸುತ್ತದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಗುರುವಾರ ನಡೆದಿದೆ. ಬಸವಾ ಪಟ್ಟಣದಿಂದ ಕೇರಳಾಪುರಕ್ಕೆ ರಸ್ತೆಯಲ್ಲಿ ದೊಡ್ಡಮಗ್ಗೆಯ ತಿಮ್ಮೇಗೌಡ (80) ಕೈಯಲ್ಲಿದ್ದ ಬ್ಯಾಗಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಆತನನ್ನು ಬಂಧಿಸಿದ್ದು, 1474 ರು. ಬೆಲೆಯ 78 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
 ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಶವವಾಗಿ ಪತ್ತೆ
ಚನ್ನರಾಯಪಟ್ಟಣ: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಲೂಕಿನ ಶಿವಪುರ ಗ್ರಾಮದ ಯುವಕ ಅರುಣ್ (22) ಮೃತದೇಹ ಕಾರೇಹಳ್ಳಿ ನಾಲೆಯಲ್ಲಿ ಪತ್ತೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement