ಕಾಡಾನೆ ದಾಳಿ; 2 ಎಕರೆ ಬಾಳೆ ತೋಟ ನಾಶ
ಸಿದ್ದಾಪುರ: ಕಾಡಾನೆ ದಾಳಿಯಿಂದಾಗಿ ಸುಮಾರು 2 ಎಕರೆ ಬಾಳೆ ಕೃಷಿ ಸಂಪೂರ್ಣ ನಾಶಗೊಂಡ ಘಟನೆ ಹಳೆ ಸಿದ್ದಾಪುರದಲ್ಲಿ ನಡೆದಿದೆ. ರವಿ ಮತ್ತು ಮನೋಹರ ಎಂಬವರಿಗೆ ಸೇರಿದ ಬಾಳೆ ತೋಟಕ್ಕೆ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಭಾರಿ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಲಕ್ಷಾಂತರ ರುಪಾಯಿ ವ್ಯಯಿಸಿ ಬಾಳೆ ಕೃಷಿ ಮಾಡಿದ್ದು, ಇನ್ನು ಕೆಲವೇ ತಿಂಗಳಲ್ಲಿ ಕಟಾವು ಮಾಡಲು ಸಿದ್ಧಗೊಂಡಿತ್ತು. ಆದರೆ ಕಾಡಾನೆಗಳ ದಾಂಧಲೆಯಿಂದ ಸುಮಾರು 3 ಲಕ್ಷಕ್ಕೂ ಅಧಿಕ ಬೆಲೆಬಾಳುವ ಫಸಲು ನಾಶಗೊಂಡಿದೆ. ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಬಾಳೆ ತೋಟದ ಮಾಲೀಕರು ಆಗ್ರಹಿಸಿದ್ದಾರೆ.