'ಗುಡ್ಡಗಾಡು ಜೀಪ್ ರ್ಯಾಲಿಗೆ ಅವಕಾಶವಿಲ್ಲ'
ಸಕಲೇಶಪುರ: ಬಿಸ್ಲೆ ರಕ್ಷಿತ ಅರಣ್ಯ ಸಮೀಪದಲ್ಲಿ ಸೋಮವಾರಪೇಟೆ ಪಯೋನಿಯರ್ ಸ್ಪೋರ್ಟ್ಸ್ ಕ್ಸಬ್
ಆಯೋಜಿಸಲು ಉದ್ದೇಶಿಸಿದ್ದ ಗುಡ್ಡಗಾಡು ಜೀಪ್ ರ್ಯಾಲಿಗೆ ಅವಕಾಶ ನೀಡುವುದಿಲ್ಲ ಎಂದು ಯಸಳೂರು ವಲಯ ಅರಣ್ಯಾಧಿಕಾರಿ ವಿನಯಚಂದ್ರ ಹೇಳಿದ್ದಾರೆ.
ತಾಲೂಕಿನ ಗಡಿಭಾಗದ ಕೊಟ್ಟಿಕಲ್ಲು ಗ್ರಾಮ ಸಮೀಪದಿಂದ ದಬ್ಬೆಹಡ್ಲು ಗ್ರಾಮ ಮಾರ್ಗವಾಗಿ ಸುಮಾರು 9 ಕಿಮಿ ದೂರದ ಪಟ್ಲ ಗ್ರಾಮದವರಗೆ ಅರಣ್ಯ ಪ್ರದೇಶದಲ್ಲಿ ಜೀಪ್ ರ್ಯಾಲಿ ನಡೆಸಲು ಉದ್ದೇಶಿಸಿದ್ದು, ಈ ರಸ್ತೆಯನ್ನೆ ರ್ಯಾಲಿಗೆ ಬಳಸಿಕೊಳ್ಳಲು ಉದ್ದೇಶಿಸಿ ಟಿಂಬರ್ ಸಾಗಿಸಲು ನಿರ್ಮಿಸಲಾಗಿದ್ದ ರಸ್ತೆಯನ್ನು ಸ್ವಚ್ಚಗೊಳಿಸುವ ಮೂಲಕ ಈ ರಸ್ತೆಯಲ್ಲೆ ರ್ಯಾಲಿ ನಡೆಸಲು ನಿರ್ಧರಿಸಿದ್ದರು.