ನಿಸ್ವಾರ್ಥ ಸೇವಾ ಮನೋಭಾವ: ಡಾ. ಗುರುರಾಜ ಹೆಬ್ಬಾರ್ ಕರೆ
ಹಾಸನ: ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ರೆಡ್ಕ್ರಾಸ್ ಘಟಕ ಉಪಾಧ್ಯಕ್ಷ ಡಾ. ಗುರುರಾಜ ಹೆಬ್ಬಾರ್ ತಿಳಿಸಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ಕ್ರಾಸ್, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಸನ ಮತ್ತು ರೋಟರಿ ಸನ್ರೈಜ್,ರೋಟರಿ ಕ್ವಾಂಟ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ, ರಾ.ಸೇ.ಯೋ ಘಟಕ ಮತ್ತು ರೆಡ್ಕ್ರಾಸ್ ಘಟಕ ಉದ್ಘಾಟಿಸಿ ಅವರು ಮಾತನಾಡಿ ಸೇವೆ ಮಾಡುವವರಲ್ಲಿ ಯಾವುದೇ ಸ್ವಾರ್ಥ ಮನೋಭಾವ ಇರಬಾರದೆಂದು ಕಿವಿಮಾತು ಹೇಳಿದರು.
ರಕ್ತದಾನದಿಂದ ಮನುಷ್ಯನಿಗೆ ಯಾವುದೆ ತೊಂದರೆ ಆಗುವುದಿಲ್ಲ. ರೆಡ್ಕ್ರಾಸ್ ಚಿಹ್ನೆಯನ್ನು ದುರುಪಯೋಗ ಪಡಿಸಿಕೊಂಡರೆ ದಂಡ ವಿಧಿಸಲಾಗುವುದು ಎಂದರು.
ಡಾ.ಹೆಬ್ಬಾರ್ ಹಾಗೂ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ರೂಪರಾಜ ಚಂದನ್ ರಕ್ತ ಪರಿಶೀಲಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಜಿಲ್ಲಾ ರೆಡ್ಕ್ರಾಸ್ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಖಜಾಂಚಿ ಮಲ್ಲಿಕಾರ್ಜುನ, ಅಧ್ಯಕ್ಷ ನಟೇಶ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಮ್. ಶಿವಣ್ಣ, ರೋಟರಿ ಕ್ವಾಂಟಕ್ಲಬ್ ಅಧ್ಯಕ್ಷ ಜೀತೇಂದ್ರ, ಹಾಸನಾಂಭ ಮಹಾವಿದ್ಯಾಲಯ ದಂತ ವೈದ್ಯ ಡಾ.ವಿವೇಕಾನಂದ, ಸುರೇಶ್ಗುರೂಜಿ ಇದ್ದರು.