ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನುಗ್ಗೇಹಳ್ಳಿಯಲ್ಲಿ ಸ್ವಾತಂತ್ರ್ಯೋತ್ಸವ

Rashmi Kasaragodu
Updated On : 17 Aug 2013, 12:40 pm

ನುಗ್ಗೇಹಳ್ಳಿ: ಪ್ರತಿಯೊಬ್ಬರು ಜೀವನದಲ್ಲಿ ಸಾಧನೆಗಳಿಸಬೇಕಾದರೆ ಸಮಯಕ್ಕೆ ಮಹತ್ವ ನೀಡಬೇಕು. ಸಮಯ ಎಲ್ಲರಿಗೂ ಅತ್ಯಮೂಲ್ಯವಾದದ್ದು, ಆದ್ದರಿಂದ ಹಿರಿಯರ ನಾಣ್ಣುಡಿಯಂತೆ ಮುತ್ತು ಕಳೆದರೆ ಸಿಗಬಹುದು, ಹೊತ್ತು ಕಳೆದರೆ ಸಿಗುವುದೇ ಎಂದು ಸಮಯದ ಮಹತ್ವವನ್ನು ತಿಳಿಸಿದರು. ಅದರಂತೆ ಪ್ರತಿಯೊಬ್ಬರೂ ಸಮಯವನ್ನು ಹಾಳುಮಾಡದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ನುಗ್ಗೇಹಳ್ಳಿಯ ಮಠಾಧೀಶ ಮಹೇಶ್ವರ ಸ್ವಾಮೀಜಿ  ತಿಳಿಸಿದರು.
 ಚನ್ನರಾಯಪಟ್ಟಣ ತಾ. ನುಗ್ಗೇಹಳ್ಳಿಯಲ್ಲಿ ಗ್ರಾಮ ಪಂಚಾಯ್ತಿ  ಮತ್ತು ಊರಿನ ಎಲ್ಲಾ ಶಾಲೆಗಳ ಮುಖ್ಯಸ್ಥರ ಸಹಯೋಗದೊಂದಿಗೆ ಎಲ್ಲಾ ಶಾಲೆಯ ಮಕ್ಕಳನ್ನು ಒಂದೆಡೆ ಸೇರಿಸಿ ಸರ್ಕಾರಿ ಶಾಲಾ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಗಿದ್ದ  67ನೇ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದರು.
 ಜಿಪಂ ಸದಸ್ಯ ರಂಗಸ್ವಾಮಿ ಕೊಟ್ಟ ಭರವಸೆಯಂತೆ ಜಿಪಂ ವತಿಯಿಂದ ಕಾಲೇಜು ಮೈದಾನದ ಸುತ್ತ ಹೊಸದಾಗಿ ಕಾಂಪೌಂಡ್ ನಿರ್ಮಾಣ ಾಡಿಸಿದ್ದು, ಮೈದಾನದ ಆವರಣದಲ್ಲಿರುವ ವೇದಿಕೆಯನ್ನು ಪೂರ್ಣಗೊಳಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆಂದು ಶ್ಲಾಘಿಸಿದರು.
 ಜಿಲ್ಲಾ ಪಂಚಾಯ್ತಿ ಸದಸ್ಯ  ಎಂ.ಎ.ರಂಗಸ್ವಾಮಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೋಭ ರಾಜಶೇಖರ್ ಮಾತನಾಡಿದರು.
ಸಮಾರಂಭದ ನಡುವೆ ಶಾಲಾ ಮಕ್ಕಳಿಂದ ದೇಶಭಕ್ತಿಗೀತೆ ಕುರಿತ ಸಾಂಸ್ಕತಿಕ ಕಾರ್ಯಕ್ರಮ ಹಾಗೂ ವಿಶೇಷವಾಗಿ ಪಿ.ಎಚ್. ದೇಶಪಾಂಡೆ ಮಕ್ಕಳು ವೀರಯೋಧರ ಹಾಗೂ ಉಗ್ರಗಾಮಿಗಳ ವೇಷತೊಟ್ಟು ಯೋಧರು ಮತ್ತು ಉಗ್ರಗಾಮಿಗಳ ನಡುವೆ ನಡೆಯುವ ಹೋರಾಟವನ್ನು ಪ್ರದರ್ಶಿಸಿ ನೆರೆದಿದ್ದ ಮಕ್ಕಳು, ಸಭಿಕರ ಮನಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement