ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯುವಕರೇ ಭ್ರಷ್ಟಾಚಾರ ತಡೆಗೆ ಮುಂದಾಗಿ...

Rashmi Kasaragodu
Updated On : 17 Aug 2013, 12:39 pm

ಕ.ಪ್ರ.ವಾರ್ತೆ    ಮೈಸೂರು    ಜು. 16
ಭ್ರಷ್ಟಚಾರವನ್ನು ತಡೆಯಲು ಯುವಕರು ಮುಂದೆ ಬರಬೇಕು ಹಾಗೂ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಸಿಕ್ರಂ ಮಾನವ ಹಕ್ಕುಗಳ ಸಂಸ್ಥೆಯ ಪ್ರಸನ್ನ ಕರೆ ನೀಡಿದರು.
ಸಿದ್ದಾರ್ಥನಗರದಲ್ಲಿರುವ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಂಸ್ಥೆಯ ಅಂಧ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯದಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಯುವಶಕ್ತಿಯು ಮುಖ್ಯ ಸಂಪನ್ಮೂಲವಾಗಿದ್ದು, ದೇಶದ ಸ್ವಾಸ್ಥ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸಬೇಕಾಗುತ್ತದೆ.
 ಅದರಲ್ಲೂ ವಿಕಲ ಚೇತನ ವ್ಯಕ್ತಿಗಳು ತಮ್ಮ ಹಕ್ಕುಗಳು ಹೊಂದುವಲ್ಲಿ ಇನ್ನಷ್ಟು ಜಾಗೃತರಾಗಬೇಕಾಗುತ್ತದೆ ಎಂದು ಹೇಳಿದರು.  ಎಂ.ಎನ್. ಪ್ರಶಾಂತ್ ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯ ಸಿಕ್ಕಿ ದಶಕಗಳೇ ಕಳೆದಿದ್ದರೂ ಸಮಾಜದಲ್ಲಿ ತಾರತಮ್ಯ ಧೋರಣೆ, ಬಂಡವಾಳ ಶಾಹಿಗಳ ಸರ್ವಾಧಿಕಾರ ತಲೆದೋರಿದೆ. ಇದನ್ನು ಕಡಿವಾಣ ಹಾಕಲು ಮುಂದಾದರು ಎಲ್ಲರೂ ಶ್ರಮಿಸಬೇಕಿದೆ ಎಂದು ತಿಳಿಸಿದರು. ಸಂಸ್ಥೆಯ ಜಯಮ್ಮ ಧ್ವಜಾರೋಹಣ ಮಾಡಿದರು. ಎನ್ಎಫ್ಬಿ ವ್ಯವಸ್ಥಾಪಕ ಎಂ. ಪ್ರಭುಸ್ವಾಮಿ ನಿರೂಪಿಸಿದರು. ನಿಲಯದ ಅಂಧ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ವಿಚಾರಗಳನ್ನು ಮೆಲುಕು ಹಾಕಿದರು. ಸಿಹಿ ಹಂಚಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement