ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಜತ ಕವಚ ಸಮರ್ಪಣೆ

Rashmi Kasaragodu
Updated On : 17 Aug 2013, 12:39 pm

ಕ.ಪ್ರ.ವಾರ್ತೆ    ಹೊಳೆನರಸೀಪುರ    ಆ. 16
ಇತ್ತೀಚೆಗಷ್ಟೇ ನೂತನವಾಗಿ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಪುನರ್ ಪ್ರತಿಷ್ಠಾಪನೆಗೊಂಡಿರುವ ಪಟ್ಟಣದ ಪೇಟೆ ಮುಖ್ಯ ರಸ್ತೆಯಲ್ಲಿನ ಕನ್ನಿಕಾಪರಮೇಶ್ವರಿ ಅಮ್ಮನವರಿಗೆ ಭಕ್ತರು  ರಜತ ಕವಚ ಅರ್ಪಿಸಲಿದ್ದಾರೆ. ಸುಮಾರು ಹದಿಮೂರು ಕೆಜಿ ತೂಕದ ಸುಂದರ ಕುಸುರಿ ಒಳಗೊಂಡಿರುವ ಕವಚಗಳನ್ನು ದೇವಾಲಯಕ್ಕೆ ತರಲಾಯಿತು. ಕನ್ನಿಕಾಪರಮೇಶ್ವರಿ ಅಮ್ಮನವರು ಹಾಗೂ ಗಣೇಶ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯ ಕಳೆದ ಜು.1ರಿಂದ ಐದು ದಿನಗಳ ಕಾಲ ನಡೆದು ಜು.5ರಂದು ಅಮ್ಮನವರ ವಿಗ್ರಹವನ್ನು ವಿಧಿ ವಿಧಾನಗಳ ಮೂಲಕ ನಡೆಸಲಾಗಿತ್ತು.  ಪ್ರತಿಷ್ಠಾಪನೆ ನಂತರ ಆರ್ಯವೈಶ್ಯ ಜನಾಂಗದವರೆಲ್ಲ ಸೇರಿ ನೂತನ ವಿಗ್ರಹಗಳಿಗೆ ರಜತ ಕವಚ ಅರ್ಪಿಸಲು ತೀರ್ಮಾನಿಸಿದ್ದರು. ಈ ರಜತ ಕವಚವನ್ನು ಕಾರ್ಕಳದ ಕಲಾವಿದ ಸುಧಾಕರ್ ತಯಾರಿಸಿದ್ದಾರೆ. ಮಂಡಲ ಪೂಜೆಯ ಮಂಗಳದಿನದಂದು ವಿಶೇಷ ಪೂಜೆ ಹೋಮ ಹವನಾದಿಗಳನ್ನು ನಡೆಸಿ ಕನ್ನಿಕಾಪರಮೇಶ್ವರಿ ಹಾಗೂ ಗಣೇಶ ವಿಗ್ರಹಕ್ಕೆ ರಜತ ಕವಚ ತೊಡಿಸುವ ಕಾರ್ಯಕ್ರಮ  ನಡೆಯಲಿದೆ ಎಂದು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್.ಅರುಣ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement