ಸಡಗರದ ದುರ್ಗಾದೇವಿ, ದೊಡ್ಡಮ್ಮ ಜಾತ್ರೆ
ಅರಸೀಕೆರೆ: ಪಟ್ಟಣದ ಸಾಧನಾ ಚಿತ್ರಮಂದಿರದ ಪಕ್ಕದಲ್ಲಿರುವ ಶ್ರೀ ದುರ್ಗಾದೇವಿ ಮತ್ತು ದೊಡ್ಡಮ್ಮ ದೇವಿ ಜಾತ್ರಾ ಮಹೋತ್ಸವ ಎರಡು ದಿನ ಸಡಗರ ಸಂಭ್ರಮದಿಂದ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಅಲಂಕಾರ ನೆರವೇರಿಸಲಾಯಿತು. ಜಾತ್ರೆಗೆ ಆಗಮಿಸಿದ್ದ ಭಕ್ತರು ದೇವಿಗೆ ಹರಕೆ ತೀರಿಸಿ ಭಕ್ತಿ ಪರಾಕಾಷ್ಟೆ ಮೆರೆದರು. ದೇವಾಲಯ ವತಿಯಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.