ಸರ್ಕಾರಿ ಐಟಿಐ ಉಳಿಕೆ ಸೀಟು ಭರ್ತಿಗೆ ಅರ್ಜಿ
ಹಾಸನ: ರಾಜ್ಯದ ಎಲ್ಲಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಖಾಲಿ ಉಳಿದಿರುವ ವೃತ್ತಿಗಳಿಗೆ ಪ್ರಸಕ್ತ 2013ನೇ ಸಾಲಿನ ಪ್ರವೇಶಕ್ಕೆ ದಿ 23-08 -2013 ರವರೆಗೆ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಮೂಲ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆ.24 ರಂದು ಬೆಳಗ್ಗೆ 11ಕ್ಕೆ ಆದ್ಯತಾನುಸಾರ ನೇರವಾಗಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಹತ್ತಿರದ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ರಾ.ಜಾನುವಾರು
ವಿಮಾ ಯೋಜನೆ
ಹಾಸನ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಜಾನುವಾರು ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ 2014ರ ಮಾರ್ಚ್ 31 ರವರೆಗೆ ಕೇಂದ್ರದ ಯೋಜನೆಯಾದ ರಾಷ್ಟ್ರೀಯ ಜಾನುವಾರು ವಿಮಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಜಾನುವಾರುಗಳ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ವಿಮೆಗೊಳಪಡಿಸುವಂತೆ ಹಾಗೂ ಈ ಯೋಜನೆಯ ಪ್ರಯೋಜನ ಪಡೆಯುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.ಹೆಚ್ಚಿನ ಮಾಹಿತಿಯನ್ನು ಮೇಲ್ಕಂಡ ಕಚೇರಿ ಸಂಪರ್ಕಿಸಿ ಪಡೆಯಬಹುದಾಗಿದೆ.
ಸಿಬ್ಬಂದಿ ಒದಗಿಸಲು ಅರ್ಜಿ ಆಹ್ವಾನ
ಹಾಸನ: ಜಿಲ್ಲೆಯಲ್ಲಿ ಸಕಾಲ ಸೇವೆಗಳ ಅಧಿನಿಯಮ ಪರಿಣಾಮಕಾರಿಯಾಗಿ ನಿರ್ವಹಿಸಲು ಎಲ್ಲಾ ತಾಲೂಕು ಕಚೇರಿಗಳಲ್ಲಿ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿರುವ ಒಟ್ಟು 9 ಸಹಾಯವಾಣಿ ಕೇಂದ್ರಗಳಿಗೆ ಗಣಕಯಂತ್ರದ ಬಗ್ಗೆ ಜ್ಞಾನವುಳ್ಳ ಆಸಕ್ತ ಸಿಬ್ಬಂದಿ ಒದಗಿಸಲು ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರತಿ ಮಾಹೆ ತಾಲೂಕಿಗೆ ಗರಿಷ್ಠ ಇಬ್ಬರು ಸಿಬ್ಬಂದಿಗೆ ತಲಾ 5000 ರು.ನಂತೆ ವೇತನ ನೀಡಲಾಗುವುದು.
ಆಸಕ್ತರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಕಾಲ ಕೌಂಟರ್ನಲ್ಲಿ ಅರ್ಜಿ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿ ಸಂರ್ಪಕಿಸಬಹುದಾಗಿದೆ.ದೂರವಾಣಿ 08172-253345.
ಬಿಡಾಡಿ ದನಗಳು ಗೋಶಾಲೆಗೆ
ಹಾಸನ: ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಮಾಡುತ್ತಿರುತ್ತವೆ. ಆದುದರಿಂದ ಸದರಿ ಬಿಡಾಡಿ ದನಗಳನ್ನು ನಗರಸಭಾ ವತಿಯಿಂದ ಹಿಡಿದು ಗೋಶಾಲೆಗೆ ಸಾಗಿಸಲಾಗುವುದು.
ದನಗಳನ್ನು ಸಾಕಿರುವ ಮಾಲೀಕರು ತಮ್ಮ ತಮ್ಮ ದನಗಳನ್ನು ಸುರಕ್ಷಿತವಾಗಿ ಕಟ್ಟಿಹಾಕಿಕೊಳ್ಳುವಂತೆ ನಗರ ಸಭೆ ಆಯುಕ್ತರು ತಿಳಿಸಿದ್ದಾರೆ. ಒಂದು ವೇಳೆ ದನಗಳನ್ನು ಕಟ್ಟಿ ಹಾಕದೇ ಬಿಟ್ಟಿದ್ದು, ಅವುಗಳನ್ನು ಹಿಡಿದು ಸಾಗಿಸಿದಲ್ಲಿ ನಗರಸಭೆಯವರು ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ.
ಕಾಲು ಬಾಯಿ ರೋಗಕ್ಕೆ ಲಸಿಕೆ
ಹಾಸನ: ಕಾಲು ಮತ್ತು ಬಾಯಿ ಜ್ವರ ರೋಗ ನಿಯಂತ್ರಣ ಯೋಜನೆಯಡಿ ಮುಂದಿನ ಸೆಪ್ಟೆಂಬರ್ 12 ರವರೆಗೆ ಜಿಲ್ಲೆಯಾದ್ಯಾಂತ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಜ್ವರ ರೋಗದ ವಿರುದ್ಧ ರೋಗ ನಿರೋಧಕ ಲಸಿಕೆ ಹಾಕುವ ಸಾಮೂಹಿಕ ಲಸಿಕೆ ಆಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಎಲ್ಲಾ ಜಾನುವಾರುಗಳ ಮಾಲೀಕರು, ಹೈನುರಾಸು ಸಾಕಾಣಿಕೆದಾರರು, ರೈತ ಭಾಂಧವರು, ಸಾರ್ವಜನಿಕ ಬಂಧುಗಳು ತಮ್ಮ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಜ್ವರ ರೋಗ ನಿರೋಧಕ ಲಸಿಕೆಯನ್ನು ಉಚಿತವಾಗಿ ಹಾಕಿಸಿಕೊಳ್ಳುವ ಮೂಲಕ ತಮ್ಮ ಜಾನುವಾರುಗಳನ್ನು ಕಾಲು ಮತ್ತು ಬಾಯಿ ಜ್ವರ ರೋಗದಿಂದ ಸಂರಕ್ಷಿಸಿಕೊಳ್ಳುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕರು ಕೋರಿದ್ದಾರೆ.