ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

Rashmi Kasaragodu
Updated On : 18 Aug 2013, 12:52 pm

ಹಾಸನ: ಪ್ರಸಕ್ತ ಸಾಲಿನಲ್ಲಿ ಕೃಷಿ ಪ್ರಶಸ್ತಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಕೃಷಿ ವಲಯದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ಸಾಲಿನಲ್ಲಿಯೂ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಕೃಷಿ ಪ್ರಶಸ್ತಿ ಸ್ಪರ್ಧೆ ಏರ್ಪಡಿಸಿದ್ದು, ಈ ಸಂಬಂಧ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 31 ಅರ್ಜಿ ಸಲ್ಲಿಸಲು ಕಡೇ ದಿನ. ರೈತರು ಅರ್ಜಿಯನ್ನು ನಿಗದಿತ ಶುಲ್ಕ ಪಾವತಿಸಿ, ಪಡೆಯಬಹುದು.
ತಾಲೂಕು ಮಟ್ಟದಲ್ಲಿ ಸಾಮಾನ್ಯ ರೈತರು 100, ಪರಿಶಿಷ್ಟ ರೈತರು 25 ರು,  ಜಿಲ್ಲಾ ಮಟ್ಟದಲ್ಲಿ ಸಾಮಾನ್ಯ ರೈತರು 150 ರು, ಪರಿಶಿಷ್ಟ ರೈತರು 40 ರು, ರಾಜ್ಯ ಮಟ್ಟದಲ್ಲಿ ಸಾಮಾನ್ಯ ರೈತರು 300 ರು, ಪರಿಶಿಷ್ಟ ರೈತರು 75 ರು. ಶುಲ್ಕ ಪಾವತಿಸಬೇಕು ಎಂದು ತಿಳಿಸಲಾಗಿದೆ.
ಬೆಳೆಗಳ ವಿವರ:  ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಸಕಲೇಶಪುರ, ಆಲೂರು ತಾ. ರೈತರಿಂದ ಭತ್ತದ ಬೆಳೆಗೆ  ಹಾಗೂ ಉಳಿದ ಎಲ್ಲಾ ತಾಲೂಕಿನ ರೈತರಿಂದ ರಾಗಿ (ಖುಷ್ಕಿ) ಬೆಳೆಗೆ ಸ್ಪರ್ಧಿಸಬಹುದಾಗಿದೆ. ಜಿಲ್ಲಾ ಕೃಷಿ ಪ್ರಶಸ್ತಿಗೆ ರಾಗಿ (ಖುಷ್ಕಿ) ಬೆಳೆಗೆ ಸ್ಪರ್ಧಿಸಬಹುದಾಗಿದೆ. ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಗೆ ಮುಸುಕಿನ ಜೋಳ (ನೀರಾವರಿ), ರಾಗಿ(ಖುಷ್ಕಿ), ಭತ್ತ (ನೀರಾವರಿ), ಕಬ್ಬು, ಸೂರ್ಯಕಾಂತಿ, ತೊಗರಿ ಬೆಳೆಗಳನ್ನು  ಆಯ್ಕೆ ಮಾಡಿಕೊಳ್ಳಬಹುದು.
ಎಲ್ಲಾ ಹಂತದ ಸ್ಪರ್ಧೆಗೆ ಕನಿಷ್ಠ 15 ಅರ್ಜಿ ನೊಂದಣಿ ಮಾಡಿಸಿಕೊಳ್ಳುವುದು ಹಾಗೂ ಪ್ರತಿ ಸ್ಪರ್ಧೆಗೆ ಕನಿಷ್ಠ 12 ತಾಕುಗಳಲ್ಲಿ ಬೆಳೆ ಕಟಾವು ಮಾಡುವುದು ಕಡ್ಡಾಯ. ಭಾಗವಹಿಸುವ ರೈತರು ಕನಿಷ್ಠ 1 ಎಕರೆಯಲ್ಲಿ  ಕಡ್ಡಾಯವಾಗಿ ಬೆಳೆ ಬೆಳೆದಿರಬೇಕು.
ಬಹುಮಾನದ ವಿವರ: ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನ 10 ಸಾವಿರ ರು. ದ್ವಿತೀಯ -5 ಸಾವಿರ, ತೃತೀಯ ಬಹುಮಾನ 3 ಸಾವಿರ ರು. ನೀಡಲಾಗುವುದು.
ಜಿಲ್ಲಾ ಮಟ್ಟದಲ್ಲಿ ಪ್ರಥಮ - 15 ಸಾವಿರ, ದ್ವಿತೀಯ - 10 ಸಾವಿರ ರು, ತೃತೀಯ ಬಹುಮಾನ 5 ಸಾವಿರ ರು. ನೀಡಲಾಗುವುದು.
ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ 30 ಸಾವಿರ ರು, ದ್ವಿತೀಯ - 15 ಸಾವಿರ ರು ಹಾಗೂ ತೃತೀಯ ಬಹುಮಾನ 10 ಸಾವಿರ ರು. ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾ. ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಶಿವರಾಜು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement