ಜಾತಿ, ಮತ ಮರೆತು ಆಚರಿಸುವ ಹಬ್ಬ ಸ್ವಾತಂತ್ರ್ಯೋತ್ಸವ
ಹೊಳೆನರಸೀಪುರ: ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲರೂ ಲಿಂಗಬೇಧ, ಧರ್ಮ ಜಾತಿ ಮತ ಮರೆತು ಆಚರಿಸುವ ಏಕೈಕ ಹಬ್ಬ ವೆಂದರೆ ಅದು ಸ್ವಾತಂತ್ರ್ಯದ ಹಬ್ಬವಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಹೇಳಿದರು. ಯಳ್ಳೇಶಪುರ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.ಮುಖ್ಯ ಶಿಕ್ಷಕ ಡಾ.ಶ್ರೀರಂಗ ಅಧ್ಯಕ್ಷತೆ ವಹಿಸಿದ್ದರು. ಯೋಧ ಯಳ್ಳೇಶ, ತಿಪ್ಪೇಸ್ವಾಮಿ, ಭೀಮರಾವ್ ಸಾಂಗ್ಲಿ ಶ್ರೀಧರ್, ನಾಗರತ್ನ, ಪದ್ಮಾವತಿ ಇದ್ದರು.