ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಸಹಕಾರ: ಶಿವಲಿಂಗೇಗೌಡ ಭರವಸೆ

Rashmi Kasaragodu
Updated On : 18 Aug 2013, 12:52 pm

ಕ.ಪ್ರ.ವಾರ್ತೆ   ಅರಸೀಕೆರೆ   ಆ. 17
ಸರ್ಕಾರಿ ನೌಕರರ ಸಂಘದ ನೂತನ ಭವನ ನಿರ್ಮಾಣಕ್ಕೆ ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿ  ಶಾಸಕ ಕೆ.ಎಂ.ಶಿವಲಿಂಗೇಗೌಡ ಭರವಸೆ ನೀಡಿದ್ದಾರೆ. ನೌಕರರ ಸಂಘದ ಭವನದಲ್ಲಿ ಶುಕ್ರವಾರ ನೂತನ ಚುನಾಯಿತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಪಟ್ಟಣದಲ್ಲಿ ಸುಸಜ್ಜಿತ ಭವನ ನಿರ್ಮಾಣಕ್ಕೆ ನಿವೇಶನದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಶ್ರಮವಹಿಸಿದರೆ ಅದಕ್ಕೆ ಅಗತ್ಯವಿರುವ ಅನುದಾನ ದೊರಕಿಸಿಕೊಡಲು ತಾವು ಸಿದ್ಧ ಎಂದರು.
ಐದಾರು ವರ್ಷಗಳಿಂದಲೂ ಈಗಿರುವ ಸರ್ಕಾರಿ ನೌಕರರ ಭವನಕ್ಕೆ ಹೊಸ ರೂಪವನ್ನು ಕೊಡಲು ರೂಪುರೇಷೆ ತಯಾರಿಸಲಾಗಿತ್ತು. ಆದರೆ ಸಮನ್ವಯದ ಕೊರತೆಯಿಂದ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ ಎಂದು ಹೇಳಿದರು.
ನೂತನ ಅಧ್ಯಕ್ಷ ಸೋಮಶೇಖರ್ ಉತ್ಸಾಹಿಗಳಾಗಿದ್ದು, ಅವರಿಗೆ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಸಂಘ ಶೈಕ್ಷಣಿಕ, ಮನೋರಂಜನಾತ್ಮಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಾರ್ಯಯೋಜನೆ ರೂಪಿಸಿಕೊಳ್ಳ ಬೇಕು ಎಂತಲೂ ತಿಳಿಸಿದರು.
ತಹಶಿಲ್ದಾರ್ ಕೇಶವಮೂರ್ತಿ, ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಬೋರೇಹಳ್ಳಿ ಸೋಮಶೇಖರ್, ಬೋರೇಗೌಡ ಇತರರು ಮಾತನಾಡಿದರು. ವೇದಿಕೆಯಲ್ಲಿ ಬಂಡೀಹಳ್ಳಿ ಗಿರೀಶ್, ಪುರಸಭಾ ಸದಸ್ಯ ಪಂಚಾಕ್ಷರಿ, ಖಜಾಂಚಿ ಪದ್ಮನಾಭ್, ಅಕ್ಷರ ದಾಸೋಹದ ಅಧಿಕಾರಿ ಪ್ರಕಾಶ್, ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement