ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಾಲ ಸೌಲಭ್ಯ ಸದುಪಯೋಗಕ್ಕೆ ಕೆ.ಎನ್.ಕೃಷ್ಣಮೂರ್ತಿ ಕರೆ

Rashmi Kasaragodu
Updated On : 18 Aug 2013, 12:55 pm

ಅರಕಲಗೂಡು: ಗ್ರಾಹಕರು ಬ್ಯಾಂಕಿನಿಂದ ದೊರಕುವ ವಿಶೇಷ ಸಾಲ ಸೌಲಭ್ಯಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದು ಎಸ್ಬಿಎಂ ಪ್ರಾದೇಶಿಕ ಕಚೇರಿ ಡೆಪ್ಯುಟಿ ಮ್ಯಾನೇಜರ್ ಕೆ.ಎನ್.ಕೃಷ್ಣಮೂರ್ತಿ ತಿಳಿಸಿದರು.
  ಎಸ್ಬಿಎಂ ಸಭಾಂಗಣದಲ್ಲಿ ಕರೆಯಲಾಗಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು ವ್ಯಾಪಾರ ಮತ್ತು ಕೈಗಾರಿಕಾಗಾಗಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಹಲವು ರೀತಿಯ ಸಾಲ ಯೋಜನೆಗಳಿವೆ. 10 ಲಕ್ಷರು. ವರೆಗಿನ ಸಾಲಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸೌಲಭ್ಯ ಒದಗಿಸಲು ಆರ್.ಬಿ.ಐ ಅದೇಶದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
  ಬ್ಯಾಂಕಿನ ವ್ಯವಸ್ಥಾಪಕ ಎಚ್.ಎಸ್.ನಾಗೇಶ್ಬಾಬು ಮಾತನಾಡಿ ಜುಲೈ 31 2013ರ ವರೆಗೆ 50 ಕೋಟಿ ರು.ಗಳ ಠೇವಣಿ ಸಂಗ್ರಹಿಸಿರುವ ಶಾಖೆ 31 ಕೋಟಿ ರು. ಸಾಲವಾಗಿ ನೀಡಲಾಗಿದೆ. ಇದರಲ್ಲಿ ವ್ಯಾಪಾರ ಸಾಲವಾಗಿ 4 ಕೋಟಿ ರು. ನೀಡಿದರೆ, 17 ಕೋಟಿ ರು. ಕೃಷಿ ಸಾಲವಾಗಿ ವಿತರಿಸಲಾಗಿದೆ ಎಂದು ವಿವರಿಸಿದರು.   ಪ್ರಾದೇಶಿಕ ಕಚೇರಿಯ ಶ್ರೀಧರ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement