ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಪರಿಶುದ್ಧ ಮನಸ್ಸಿನಿಂದ ಉತ್ತಮ ಸಾಧನೆ ಸಾಧ್ಯ'

Vishwanath S
Updated On : 19 Aug 2013, 12:09 pm

ಕ.ಪ್ರ.ವಾರ್ತೆ ,  ನುಗ್ಗೇಹಳ್ಳಿ ,  ಆ.18
ಪರಿಶುದ್ಧವಾದ ಮನಸ್ಸಿನಿಂದ ಕೆಲಸ ಮಾಡಿದರೆ ಜೀವನದಲ್ಲಿ ಉತ್ತಮ ಸಾಧನೆ ಸಾಧ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಇಲ್ಲಿಗೆ ಸಮೀಪದ ಅಮರಗಿರಿ ಚಿಕ್ಕೋನಹಳ್ಳಿ ರಂಗನಾಥಸ್ವಾಮಿ ದೇವಾಲಯದ ಗೋಪುರ ಕೆತ್ತನೆ ಕಾಮಗಾರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾರ್ವನಿಕರಿಗೆ ಬೇಕಾದ ಒಳ್ಳೆಯ ಕೆಲಸಗಳನ್ನು ಮಾಡುವಾಗ ಜನ ಪ್ರೋತ್ಸಾಹಿಸಬೇಕು, ಕೆಟ್ಟ ಕೆಲಸಗಳನ್ನು ಮಾಡುವಾಗ ಜನರೇ ಪ್ರಶ್ನಿಸುವಂತಾಗಬೇಕು, ಆಗ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಂಗನಾಥಸ್ವಾಮಿ ದೇವಾಲಯಕ್ಕೆ ತಗಡೂರಿನಿಂದ ಸಿಮೆಂಟ್ ರಸ್ತೆ, ಸಮುದಾಯ ಭವನ, ಹೊರಾಂಗಣ, ಊಟದ ಹಾಲ್ ಹಾಗೂ ಪ್ರವಾಸಿ ಕೇಂದ್ರ ಮಾಡಿಸುವುದಾಗಿ ಇದೇ ವೇಳೆ ಭರವಸೆ ನೀಡಿದರು.
ಜಿಪಂ ಅಧ್ಯಕ್ಷೆ ಅಂಬಿಕ ರಾಮಣ್ಣ ಮಾತನಾಡಿ ತ್ಯಾಗ, ಸೇವಾ ಮನೋಭಾವನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು. ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗೂರೂಜಿ ನೇತೃತ್ವ ವಹಿಸಿದ್ದರು.
ಜಿಪಂ ಸದಸ್ಯ ಶಿವಶಂಕರ್‌ಕುಂಟೆ, ತಾಪಂ ಸದಸ್ಯ ಬಸವರಾಜು ಪಂಡಿತ್ ಶ್ರೀಧರ್,  ಪ್ರಧಾನ ಅರ್ಚಕ ಶ್ರೀಕಾಂತ, ಜೆಡಿಎಸ್ ಮುಖಂಡ ರಾಮಚಂದ್ರಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಮಂಜೇಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಸವಲಿಂಗಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಕುಳ್ಳೇಗೌಡ, ಅಶೋಕ, ನಿವೃತ್ತ ಶಿಕ್ಷಕ ಗಿರಿಗೌಡ, ಚನ್ನೇಗೌಡ ಇದ್ದರು. ಗ್ರಾಪಂ ಸದಸ್ಯ ವಿಜಯ ಕುಮಾರ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement