ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತ್ತೆ ಬೈಪಾಸ್‌ನಲ್ಲೇ ಬಸ್ ಸಂಚಾರ:ಆಲೂರು ನಾಗರಿಕರಿಂದ ಪ್ರತಿಭಟನೆ

Vishwanath S
Updated On : 20 Aug 2013, 12:12 pm

ಕನ್ನಡಪ್ರಭ ವಾರ್ತೆ, ಆಲೂರು, ಆ.19
ಧರ್ಮಸ್ಥಳ ಡಿಪೋಗೆ ಸೇರಿದ ಸುಮಾರು ನಾಲ್ಕೈದು ಬಸ್‌ಗಳು ಹಾಸನ ನಗರ ಮೂಲಕ ಬಾರದೆ ಹಾಸನ
ಬೈಪಾಸ್ ಮುಖಾಂತರ ಬರುತ್ತಿದ್ದ ಕಾರಣ ಚಾಲಕ ಹಾಗೂ ನಿರ್ವಾಹಕರು ಇದನ್ನು ಪ್ರಶ್ನಿಸಿದ ಆಲೂರಿನ ಪ್ರಯಾಣಿಕರೊಂದಿಗೆ ಕೆಟ್ಟದ್ದಾಗಿ ಬೈಯ್ದು ಅಸಭ್ಯವಾಗಿ ನಡೆದು ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಇಬಿ ವೃತ್ತದಲ್ಲಿ ನಾಗರಿಕರು ಬಸ್‌ಗಳನ್ನು ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.
 ಈ ಸಂದರ್ಭದಲ್ಲಿ ಚಾಲಕ, ನಿರ್ವಾಹಕರು ಉಧ್ಧಟತನದಿಂದ ನಮಗೆ ಬೈಪಾಸ್‌ನಲ್ಲಿಯೇ ಸಂಚರಿಸುವಂತೆ ಆದೇಶವಿದ್ದು ಅದರಂತೆ ನಾವು ನಡೆದುಕೊಂಡಿದ್ದೇವೆಂದರು. ಪ್ರತಿ ದಿನವೂ ಮಂಗಳೂರು ಹಾಗೂ ಪುತ್ತೂರು ಡಿಪೋ ಚಾಲಕರು ತೀವ್ರ ತೊಂದರೆ ನೀಡುತ್ತಿದ್ದು ಕೆಲವು ವಾಹನಗಳು ಹಾಸನ ಸಿಟಿಗೆ ಹೋಗುವುದಿಲ್ಲವೆಂದು ತಗಾದೆ ಮಾಡುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
  ಕೆಲವೇ ದಿನಗಳ ಹಿಂದೆ ಬಸ್ ತಡೆಹಿಡಿದು ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಬಂದ ಇಲಾಖೆಯ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರುವ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಕ್ರಮ ಕೈಗೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುತ್ತೇವೆಂದು ಲಿಖಿತ ಹೇಳಿಕೆ ನೀಡಿದ್ದರು. ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
 ಕೇಂದ್ರ ಕಚೇರಿ ಆದೇಶವಿದ್ದರೂ ಹಾಸನ ನಗರದ ಮೂಲಕ ಸಂಚರಿಸದೆ ಬೈಪಾಸ್ ಮೂಲಕ ಸಂಚರಿಸುತ್ತಿರುವುದು ಸಂಸ್ಥೆಯ ಆದೇಶದ ಉಲ್ಲಂಘನೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿದೆ.
  ಆದರೆ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದನ್ನು ನೋಡಿದರೆ ಅಧಿಕಾರಿಗಳ ಕಾರ್ಯವೈಖರಿ ಹಾಗು ಚಾಲಕ ನಿರ್ವಾಹಕರ ಅಸಡ್ಡೆ ತೋರುತ್ತಿದ್ದು, ಸಮಸ್ಯೆಯನ್ನು ಬಗೆಹರಿಸುವಲ್ಲಿ ಹಾಗೂ ಸಂಸ್ಥೆಯ ನೌಕರರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸಾರ್ವಜನಿಕರ ಹಿತವನ್ನು ಕಾಪಾಡುವಲ್ಲಿ ವಿಫಲವಾಗಿರುವ ಸಂಸ್ಥೆಯ ಡಿ.ಸಿ.ಸ್ಟ್ಯಾಂಡ್ ಇನ್‌ಚಾರ್ಜ್ ಟಿ.ಸಿ. ಮುಂತಾದ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಬೇಕೆಂದು ಜನತೆ ಒತ್ತಾಯಿಸಿದ್ದಾರೆ.
 ಗ್ರಾಪಂ ಸದಸ್ಯ ಸುರೇಶ್, ನಾಗರಿಕ ಹೋರಾಟ ಸಮಿತಿ ಕೆ.ವಿ.ಮಲ್ಲಿಕಾರ್ಜುನ್, ಛಲವಾದಿ ಮಹಾಸಭಾ ಅಧ್ಯಕ್ಷ ಎ.ಟಿ.ಮಲ್ಲೇಶ್,ಬಲಿಜ ಸಂಘದ ಅಧ್ಯಕ್ಷ ಎಂ.ರಂಗನಾಥ್, ಜೈಪಾಲ್, ಸತ್ತಿ, ಜೆ.ಸಿ.ಬಿ. ಲೋಕಿ, ಮಚ್ಚು ಮಂಜು, ಗುಬ್ಬಿ, ಹಂತನಮನೆ ಜಗ, ಪ್ಯಾರಿ, ರಘು, ಟೀಕರಾಜ್, ಸಿದ್ದೇಶ್ವರ ಪ್ರಸಾದ್, ಅರುಣ್, ಶಿವಣ್ಣ, ಪ್ರದೀಪ್, ಶಾಂತಕೃಷ್ಣ, ನಂಜಶೆಟ್ಟಿ, ಉಪ್ಪಿನ ಧರ್ಮಣ್ಣ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement