ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರು. 1.5 ವೆಚ್ಚದಲ್ಲಿ ಕನಕ ಭವನ ನಿರ್ಮಾಣ: ಕುರುಬರ ಸಂಘದ ಉಪಾಧ್ಯಕ್ಷ ನವಿಲೆ ಅಣ್ಣಪ್ಪ

Vishwanath S
Updated On : 20 Aug 2013, 12:12 pm

ಕ.ಪ್ರ. ವಾರ್ತೆ, ಹಾಸನ, ಆ. 19
ಜಿಲ್ಲಾ ಕುರುಬರ ಸಂಘದ ವತಿಯಿಂದ ನಗರದಲ್ಲಿ ಕನಕ ಭವನವನ್ನು 1.5 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಕುರುಬರ ಸಂಘದ  ಉಪಾಧ್ಯಕ್ಷ ನವಿಲೆ ಅಣ್ಣಪ್ಪ ತಿಳಿಸಿದರು.
 ಜಿಲ್ಲಾ ಕೇಂದ್ರದಲ್ಲಿ ಸಂಘ ಸುಸಜ್ಜಿತವಾದ ಸಮುದಾಯ ಭವನವನ್ನು ಹೊಂದಿರಬೇಕೆಂಬ ಉದ್ದೇಶದಿಂದ ಕನಕ ಭವನ ನಿರ್ಮಾಣ ಮಾಡುತ್ತಿದ್ದು, ಆ ಮೂಲಕ ಅದನ್ನು ದಾಸ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ರಾಜ್ಯ ಸಂಘ ಈಗಾಗಲೇ 10 ಲಕ್ಷ ರು. ಹಣ ನೀಡಿದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
 ಕನಕ ಭವನ ನಿರ್ಮಾಣಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವರು ಮಂದಿ ಹಣ ನೀಡಿದ್ದಾರೆ. ಶಾಸಕರು ಹಾಗೂ ಸಂಸದರ ನಿಧಿಯಿಂದಲೂ ಅನುದಾನ ದೊರಕುವ ಭರವಸೆ ಇದ್ದು, ಉಳಿದಂತೆ ಜಿಲ್ಲೆಯಲ್ಲಿರುವ ಸಮುದಾಯದ 3 ಸಾವಿರ ಸರ್ಕಾರಿ ನೌಕರರು ಧನ ಸಹಾಯ ಮಾಡಲಿದ್ದಾರೆ. ಸರ್ಕಾರದಿಂದ ಇದೂವರೆಗೂ ಯಾವುದೇ ಅನುದಾನವನ್ನಾಗಲೀ, ಸಹಾಯವನ್ನಾಗಲೀ ಕೇಳಿಲ್ಲ. ಸಾಧ್ಯವಾದಷ್ಟು ಸಮುದಾಯದ ಎಲ್ಲಾ ಜನರ ಸಹಕಾರ ಇರಬೇಕು ಎಂದರು.
 ಆದಷ್ಟು ಬೇಗನೆ  ಕಾಮಗಾರಿ  ಪೂರ್ಣಗೊಳಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಆ.24ರಂದು  ನಡೆಯಲಿರುವ ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಣ್ಣ, ಶಿವಪ್ಪ , ಸಿದ್ದೇಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement