ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲಾದ್ಯಂತ ರಕ್ಷಾಬಂಧನ

Vishwanath S
Updated On : 21 Aug 2013, 12:44 pm

ಕ.ಪ್ರ. ವಾರ್ತೆ, ಹಾಸನ, ಆ. 20
ಅಣ್ಣ ತಂಗಿಯರ ಬಂಧವನ್ನು ಬೆಸೆಯುವ ರಕ್ಷಾ ಬಂಧನ ಹಬ್ಬವನ್ನು ಮಂಗಳವಾರ ಜಿಲ್ಲಾದ್ಯಂತ ನಾನಾ ಸಂಘಟನೆಗಳಿಂದ ಆಚರಿಸಲಾಯಿತು. ಅನನ್ಯ ಟ್ರಸ್ಟ್ ವತಿಯಿಂದ ಜಿಲ್ಲಾ ಕಾರಾಗೃಹದ ಕೈದಿಗಳಿಗೆ ರಕ್ಷಾ ಬಂಧನ ಕಟ್ಟಿಸಲಾಯಿತು. ನಗರ ಕಾರಾಗೃಹದಲ್ಲಿರುವ ಸುಮಾರು 272 ಕೈದಿಗಳಿಗೆ ಟ್ರಸ್ಟ್‌ವತಿಯಿಂದ ರಕ್ಷಾ ಬಂಧನ ಕಟ್ಟಲಾಯಿತು. 12 ಮಹಿಳಾ ಕೈದಿಗಳಿಂದಲೂ ರಕ್ಷಾ ಬಂಧನ ಕಟ್ಟಿಸಲಾಯಿತು.
 ಈ ಸಂದರ್ಭದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕ ಕೃಷ್ಣಮೂರ್ತಿ, ಕೆ.ಟಿ.ಜಯಶ್ರೀ, ವಿಜಯಕುಮಾರಿ, ಹೇಮಲತಾ, ನಿರ್ಮಲಾ, ರುಕ್ಮೀಣಿ ಹಾಗೂ ಇತರರು ಇದ್ದರು.         
ಹಿಂದೂ ಜನಜಾಗೃತಿ ಸಮಿತಿ: ಭಾರತಿ ವಿದ್ಯಾ ಮಂದಿರದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಸಮಿತಿಯ ತಾರಾ ಹರ್ಷವರ್ಧನ್ ಮಾತನಾಡಿ, ಮಕ್ಕಳು ಭಕ್ತಿ ಭಾವವನ್ನು ಬೆಳೆಸಿಕೊಂಡು ಅಣ್ಣ ತಂಗಿಯರಂತೆ ಸ್ನೇಹ ಬೆಳೆಸಿ ಓದುವಿನ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆಯನ್ನು ನೀಡಿದರು.
 ನಂತರ ಭಾರತಿ ವಿದ್ಯಾ ಮಂದಿರದ ಮುಖ್ಯ ಉಪಾಧ್ಯಾಯ ಚಂದ್ರಕಾಂತ್ ಪೆಡೇಸೂರು ಅವರು ಶಾಲಾ ಮಕ್ಕಳಿಂದ ರಕ್ಷಾ ಬಂಧನ ಕಟ್ಟಿಸಿದರು. ಸಮಿತಿಯ ಸುಜಾತ ನವೀನ್‌ಜೈನ್ ಇತರರು ಇದ್ದರು.  ನಗರದ ನಿವೇದಿತಾ ಶಾಲೆ, ರಾಮಕೃಷ್ಣ ವಿದ್ಯಾಲಯ, ವಾಸವಿ ಶಾಲೆ ಸೇರಿದಂತೆ ಇತರೆ ಶಾಲೆಗಳಿಗೆ ತೆರಳಿ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಿದರು.
ಬ್ರಹ್ಮಾಕುಮಾರಿ ಸಮಾಜದಿಂದ: ನಗರದಲ್ಲಿ ಬ್ರಹ್ಮಾಕುಮಾರಿ ಸಮಾಜದಿಂದ ರಾಖಿ ಕಟ್ಟುವ ಮೂಲಕ ಸಹೋದರಿಯ ಸ್ನೇಹ ಸಂಬಂಧ ಬೆಳಸಿದರು. ನಂತರ ಸಿಹಿ ಹಂಚಿ ರಕ್ಷಾ ಬಂಧನದ ಶುಭಾಶಯ ಕೋರಿಸದರು. ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಸಮಾಜದವರು ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement