ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಗರಸಭೆ ಸದಸ್ಯರ ಸಭೆಗೆ ಒತ್ತಾಯಿಸಿ ಮನವಿ

Vishwanath S
Updated On : 21 Aug 2013, 12:43 pm

ಕ.ಪ್ರ.ವಾರ್ತೆ , ಹಾಸನ , ಆ.20
ನಗರಸಭೆಯ ಎಲ್ಲಾ ವಾರ್ಡ್‌ಗಳನ್ನು ನಿರ್ಲಕ್ಷ್ಯ ಮಾಡಲಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭೆ ಸದಸ್ಯರ ಸಭೆ ಕರೆಯುವಂತೆ ಒತ್ತಾಯಿಸಿ ಕೆಲ ಕಾಂಗ್ರೆಸ್ ನಗರಸಭೆ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಅನ್ಬುಕುಮಾರ್‌ಗೆ ಮನವಿ ನೀಡಿದರು.
ನಗರ ಸ್ವಚ್ಛತೆ ವಿಚಾರವಾಗಿ ನಗರಸಭೆ ಅಧಿಕಾರಿಗಳಿಗೆ ಮನವಿ ನೀಡಿದ್ದರು ಸಹ ಸಮರ್ಪಕವಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಚರಂಡಿಗಳ ಸ್ವಚ್ಛತೆ ಕಸ ಹಾಗೂ ಗಿಡ-ಗಂಟೆಗಳು ಬೆಳೆದು ಅನೈರ್ಮಲ್ಯ ಉಂಟಾಗಿದೆ. ಸ್ವಚ್ಛತೆಗೆ ಒಬ್ಬ ಪೌರ ಕಾರ್ಮಿಕರನ್ನು 35 ವಾರ್ಡ್‌ಗಳಿಗೂ ನೇಮಿಸದೆ ನಿರ್ಲಕ್ಷ ವಹಿಸಲಾಗಿದೆ.  ಅನೈರ್ಮಲ್ಯದಿಂದ ಉಂಟಾಗಿರುವ ಸೊಳ್ಳೆ ಕಾಟ ತಪ್ಪಿಸಲು ಪಾಗಿಂಗ್ಮಾಡುವುದು ಮತ್ತು ರಸಾಯನಿಕ ಸಿಂಪಡಿಸುವುದು ಕಣ್ಮರೆಯಾಗಿದೆ. ಕಸದ ತೊಟ್ಟಿಗಳು ತುಂಬಿದ್ದರೂ ಸರಿಯಾದ ಸಮಯಕ್ಕೆ ವಿಲೇವಾರಿ ಆಗುತ್ತಿಲ್ಲ ಹಾಗೂ ಕೆಲಸಕ್ಕೆ ಪೌರಕಾರ್ಮಿಕರ ನಿಯೋಜಿಸದಿದ್ದರೂ ಸಹ ಹಾಜರಾತಿ ಪುಸ್ತಕದಲ್ಲಿ ಮಾತ್ರ ನೋಂದಣಿಯಾಗಿರುತ್ತದೆ ಎಂದು ಆರೋಪಿಸಿದರು.   ಆರೋಗ್ಯ ನಿರೀಕ್ಷಕರು ವಾರ್ಡ್‌ಗಳಿಗೆ ಬರುವಂತೆ ಮನವಿ ಮಾಡಿದ್ದರೂ ಸಹ ಅಧಿಕಾರಿಗಳು ಗಮನ ನೀಡದೆ ತಾತ್ಸಾರ ಮಾಡುತ್ತಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆ ದೃಷ್ಟಿಯಿಂದ ಮನೆ ಮನೆಗೆ ಕಸದ ಬಕೆಟ್ ವಿತರಣೆ ಮಾಡಿರುವುದು ಹೆಸರಿಗೆ ಮಾತ್ರ. ಅದರಲ್ಲಿ ಕಸ ಸಂಗ್ರಹಣೆ ಮಾಡದೆ ದುರುಪಯೋಗ ಆಗುತ್ತಿದೆ ಎಂದು ದೂರಿದ ಅವರು, ನಾನಾ ಸಮಸ್ಯೆಗಳು ನಗರದಲ್ಲಿ ಕಂಡು ಬರುತ್ತಿದ್ದು, ಸಾರ್ವಜನಿಕರ ಪರವಾಗಿ ಸಂಬಂಧ ಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು. ನಗರಸಭೆ ಸದಸ್ಯ ಎಚ್.ಎಂ.ಯಶವಂತ್, ರಮೇಶ್‌ಬಾಬು ಮತ್ತು ಆರೀಫ್‌ಖಾನ್ ಹಾಗೂ ಖಯಂ, ಕುಮಾರ್, ಸಿ.ಟಿ.ಕುಮಾರ್, ಆಡುವಳ್ಳಿ ರವಿ, ಅನು, ಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement