ರಾಘವೇಂದ್ರರ 342ನೇ ಆರಾಧನಾ ಮಹೋತ್ಸವ
ಹಾಸನ: ನಗರದ ರಾಯರ ಮಠದಲ್ಲಿ ರಾಘವೇಂದ್ರ ಸಮಿತಿಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವವನ್ನು ಆ. 21, 22, 23 ರಂದು ಏರ್ಪಡಿಸಲಾಗಿದೆ.ಆ.21 ರಂದು ಪೂರ್ವಾರಾಧನೆ ಪ್ರಯುಕ್ತ ಬೆಳಗ್ಗೆ 6.30 ರಿಂದ ಉಷ: ಕಾಲ ಪೂಜೆ, ಅಭಿಷೇಕ, ಅಷ್ಟೋತ್ತರ, ಅಲಂಕಾರ, ಮಹಾಪೂಜೆ, ಸಂಜೆ 6.30ಕ್ಕೆ ಶ್ರೀನಿಧಿ ಸುಗಮ ಸಂಗೀತ ತಂಡದಿಂದ ಭಕ್ತಿ ಭಾವ ಲಹರಿ ಸಂಗೀತ ಕಾರ್ಯಕ್ರಮವನ್ನು ಸಿರಿ, ರಾಣಿ, ಫಲ್ಗುಣ ಗಾಯನ ನಡೆಸಿಕೊಡವರು.
ಆ. 22 ರಂದು ಮಧ್ಯಾರಾಧನೆ ಪ್ರಯುಕ್ತ ಬೆಳಗ್ಗೆ 6.30 ರಿಂದ ಉಷ: ಕಾಲ ಪೂಜೆ, ಅಷ್ಟಾಕ್ಷರ ಜಪ ಪುನಶ್ಚರಣೆ, ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 5 ಗಂಟೆಗೆ ಭಜನೆ, ಸಂಜೆ 6.15 ರಿದ ಭವ್ಯ ಸಂಗೀತ ಕಚೇರಿ ನಡೆಯಲಿದೆ.
ಆ. 23 ರಂದು ಉತ್ತರಾಧನೆಯಲ್ಲಿ ಬೆಳಗ್ಗೆ 6.30ಕ್ಕೆ ಉಷ: ಕಾಲ ಪೂಜೆ, ಎಳನೀರು ಅಭಿಷೇಕ, ಅಷ್ಟೋತ್ತರ, ಅಲಂಕಾರ, ಮಹಾಪೂಜೆ, ಬೆಳಗ್ಗೆ 9 ರಿಂದ ಮಠದ ಸುತ್ತಲಿನ ರಸ್ತೆಗಳಲ್ಲಿ ಅಲಂಕೃತ ರಥದಲ್ಲಿ ವೇದಘೋಷಣ, ಭಜನೆ, ವಾದ್ಯಮೇಳಗಳೊಡನೆ ಶ್ರೀರಾಯರ ಪ್ರಥಮ ಅವತಾರ ಶ್ರೀ ಪ್ರಹ್ಲಾದರಾಯರ ದಿವ್ಯ ರಥೋತ್ಸವ ನಡೆಯಲಿದೆ. ಸಂಜೆ 6 ಗಂಟೆಗೆ ಭಕ್ತಿ ಗಾಯನ ಪ್ರಸಿದ್ಧ ಸಂಗೀತ ಶಿರಮಣೀ ವಿ. ವಿದ್ಯಾಭೂಷಣರು ಮತ್ತು ವೃಂದದವರಿಂದ ಭಕ್ತಿ ಗಾನ ಸುಧೆ ನಡೆಯಲಿದೆ.
ಇಂದು ಜವೇನಹಳ್ಳಿ ಮಠದಲ್ಲಿ ಸದ್ಭಾವ ಸಂಗಮ
ಹಾಸನ: ಶ್ರಾವಣ ಮಾಸದ ಅಂಗವಾಗಿ ನಗರದ ಜವೇನಹಳ್ಳಿ ಮಠದಲ್ಲಿ ಆ.21 ರಂದು 151ನೇ ಸದ್ಭಾವ ಸಂಗಮ ಕಾರ್ಯಕ್ರಮ ಸಂಜೆ 5-30ಕ್ಕೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಜವೇನಹಳ್ಳಿ ಮಠದ ಮಠಾಧೀಶ ಸಂಗಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ವಿಶ್ವ ವೀರಶೈವ ಲಿಂಗಾಯುತ ವೇದಿಕೆ ರಾಜ್ಯಾಧ್ಯಕ್ಷ ಶಿವಲಿಂಗ ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿಂದೂಳಿದ ವರ್ಗಗಳ ಒಕ್ಕೂಟದ ರಾಜ್ಯ ಸಂಚಾಲಕ ನಿಂಗೇಗೌಡ ಭಾಗವಹಿಸುವರು.