ಹೋಮಿಯೋಪತಿ ಚಿಕಿತ್ಸೆ ಅತ್ಯುತ್ತಮ: ಡಾ. ತಳವಾಡ್
ಕ.ಪ್ರ. ವಾರ್ತೆ, ಹಾಸನ, ಆ. 20
ನಾನಾ ರೋಗಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಹೋಮಿಯೋಪತಿ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುತ್ತಿಗೆ ವೈದ್ಯಾಧಿಕಾರಿ ಸಂಗಮೇಶ್ ತಳವಾಡ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರು, ಮನುಷ್ಯನ ಉತ್ತಮವಾದ ಆರೋಗ್ಯಕ್ಕೆ ಹೋಮಿಯೋಪಥಿ ಚಿಕಿತ್ಸೆ ಉತ್ತಮವಾಗಿದೆ. ಎಲ್ಲಾ ರೋಗಗಳಿಗೂ ಹೋಮಿಯೋಪಥಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಆಯುರ್ವೇದಲ್ಲಿ ಹೆಚ್ಚಾಗಿ ಸಸ್ಯಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ. ಹೋಮಿಯೋಪಥಿಯಲ್ಲಿ ಯಾವುದೇ ಕೆಮಿಕಲ್, ಐಟೇಕ್ ಅಂಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೆಲ ಚಿಕಿತ್ಸೆಗಳಿಗೆ ಮಾತ್ರ ಸರ್ಜರಿ ಬೇಕಾಗಿದ್ದು, ಉಳಿದ ಚಿಕಿತ್ಸೆಯನ್ನು ಹೋಮಿಯೋಪಥಿಯಿಂದ ಶೀಘ್ರ ಗುಣಮುಖರಾಗಬಹುದು ಎಂದು ಹೇಳಿದರು.
ಅಕ್ರಮ ಮದ್ಯ ಮಾರಾಟ: ಒಬ್ಬ ಬಂಧನ
ಬೇಲೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ. ತಾಲೂಕಿನ ಮರೂರು ಗ್ರಾಮ ಗೆಂಡೇಹಳ್ಳಿ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮರೂರು ಗ್ರಾಮ ಗುರು (20) ಎಂಬುವನನ್ನು ಬಂಧಿಸಿದ್ದು, ಮದ್ಯ ಮಾರಾಟಕ್ಕಿಟ್ಟಿದ್ದ 1454 ರು. ಬೆಲೆಯ 60 ಮದ್ಯದ ಪ್ಯಾಕೇಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.