ತಾಯಿ, ಮಗು ಸೇರಿ ಮೂವರು ನಾಪತ್ತೆ
ಚನ್ನರಾಯಪಟ್ಟಣ: ತಾಲೂಕಿನಲ್ಲಿ ಪ್ರತ್ಯೇಕ ಸ್ಥಳಗಳಿಂದ ಮಗು ಸೇರಿದಂತೆ ಮೂವರು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.
ಪಟ್ಟಣದ ಮಕಾನ್ ಕ್ರಾಸ್ ವಾಸಿ ಮಹಮದ್ ರಫೀಕ್ ಅವರ ಪತ್ನಿ ಶಾಹಿಲಾ (22) ತಮ್ಮ ಮಗ ಸುಹೈಲ್ (4) ನೊಂದಿಗೆ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಶಾಹಿಲಾ 5 ಅಡಿ ಎತ್ತರ, ಉದ್ದ ಮುಖ, ಕನ್ನಡ ಮತ್ತು ಉರ್ದು ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಮತ್ತು ಬಿಳಿ ಮಿಶ್ರಿತ ಚೂಡಿದಾರ ಧರಿಸಿದ್ದರು. ಮಗ ಸುಹೈಲಾ 4 ವರ್ಷದ ಬಾಲಕನಾಗಿದ್ದಾನೆ ಎಂದು ಶಾಹೀಲಾ ತಾಯಿ ಹಾಜೀ ಇಸ್ಮಾಯಿಲ್ ಪಟ್ಟಣ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಶ್ರವಣಬೆಳಗೊಳ ಹೋಬಳಿ, ಆಲದಹಳ್ಳಿ ಗ್ರಾಮದ ಬಳಿ ಇರುವ ಎಂಸಿಆರ್ಪಿ ಕಾಲೋನಿ ವಾಸಿ ಕರಿಯಪ್ಪ (82) ಅವರು ಮನೆಯಿಂದ ಹೊರ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
5.4 ಅಡಿ ಎತ್ತರ, ಕೋಲು ಮುಖ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್, ಬಿಳಿ ಪಂಚೆ ಧರಿಸಿದ್ದರು ಎಂದು ಕರಿಯಪ್ಪನವರ ಅಣ್ಣನ ಮಗ ಜಯರಾಂ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.