ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಕಲಿ ವೈದ್ಯ, ಬೇನಾಮಿ ಕ್ಲಿನಿಕ್‌ಗಳಿಗೆ ಬೀಗ

Vishwanath S
Updated On : 22 Aug 2013, 12:26 pm

ಕ.ಪ್ರ.ವಾರ್ತೆ , ಬೇಲೂರು , ಆ. 21
ವೈದ್ಯನಲ್ಲದಿದ್ದರೂ ವೈದ್ಯನೆಂದು ಹೇಳಿಕೊಂಡು ಕ್ಲಿನಿಕ್ ನಡೆಸುತ್ತಿದ್ದ ರವಿರಾಜ್ ಎಂಬುವರ ವಿರುದ್ಧ ಬುಧವಾರ ಜಿಲ್ಲಾ ಆರೋಗ್ಯಾಧಿಕಾರಿ ಪೊಲೀಸರಿಗೆ ದೂರು ಸಲ್ಲಿಸಿದ ಮೇರೆಗೆ ಕ್ಲಿನಿಕ್‌ಗೆ ಬೀಗ ಜಡಿಯಲಾಯಿತು.
ಇಲ್ಲಿಗೆ ಆಗಮಿಸಿದ ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ರಾಜಗೋಪಾಲ್ ನೇತೃತ್ವದಲ್ಲಿ ತಾಲೂಕು ವೈದ್ಯಾಧಿಕಾರಿ ಸಂಧ್ಯಾ, ಕ್ಲಿನಿಕ್ ಬೀಗ ತೆಗೆದು ಒಳಗಿದ್ದ ವಸ್ತುಗಳ ವಿವರ ದಾಖಲಿಸಿಕೊಂಡರು.
ನಂತರ ನಕಲಿ ವೈದ್ಯರಿಂದ ಮುಚ್ಚಳಿಕೆ ಬರೆಸಿಕೊಂಡು ಸಹಿ ಪಡೆಯಲಾಯಿತು. ನಕಲಿ ವೈದ್ಯ ರವಿರಾಜ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ ಅಧಿಕಾರಿಗಳು ಇನ್ನುಮುಂದೆ ಎಲ್ಲಿಯೂ ಕ್ಲಿನಿಕ್ ತೆರೆಯಬಾರದೆಂದು ಸೂಚಿಸಿದರು.  ಕ್ಲಿನಿಕ್ ಸೀಜ್ ಮಾಡಿಸುವ ಸಂದರ್ಭ ಜಿಲ್ಲಾ ವೈದ್ಯರ ಸಂಘದ ಪ್ರಮುಖರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ನಕಲಿ ವೈದ್ಯ ರವಿರಾಜ್, ನನ್ನನ್ನು ಪೊಲೀಸರು ಕರೆದೊಯ್ಯುತ್ತಿದ್ದಾರೆ, ಅವರಿಗೆ ಕೆಲವು ವಿಷಯ ತಿಳಿಸಬೇಕೆಂದು ಮನವಿ ಮಾಡಿದರು.
ಇದನ್ನು ತಿರಸ್ಕರಿಸಿದ ಅಧಿಕಾರಿಗಳು ಅದೆಲ್ಲ ನಿಮಗೆ ಬಿಟ್ಟ ವಿಷಯ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಪೊಲೀಸ್ ಅಧಿಕಾರಿಗೂ ಹಾಗೂ ಜಿಲ್ಲಾ ವೈದ್ಯ ಸಂಘದ ಪ್ರಮುಖರೊಂದಿಗೆ ದೂರವಾಣಿ ಸಂಪರ್ಕ ಸಾಧಿಸಲು ಯತ್ನಿಸಿದಾಗ ಪೊಲೀಸ್ ಅಧಿಕಾರಿ ತಿರಸ್ಕರಿಸಿದರಲ್ಲದೆ ಠಾಣೆಗೆ ಬರುವಂತೆ ಸೂಚಿಸಿದರು.
ಇದೇ ಸಂದರ್ಭ ನೆಹರೂನಗರದ ಸಂಜೀವಿನಿ ಕ್ಲಿನಿಕ್‌ಗೆ ತೆರಳಿದ ಅಧಿಕಾರಿಗಳ ತಂಡ ಅನುಮತಿ ಪಡೆಯದೆ ಬೇರೆಯವರ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯೆ ಆಯಿಷರನ್ನು ತರಾಟೆ ತೆಗೆದುಕೊಂಡು ಕ್ಲಿನಿಕ್ ಬಂದ್ ಮಾಡಿದರು. ಆಯುಷ್ ಅಧಿಕಾರಿ ನಂಜರಾಜ್, ಪುರಸಭೆ ಸದಸ್ಯ ಮಂಜುನಾಥ್, ಸಂಘಟನೆಯ ಖಾದರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement