ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎರಡು ತಲೆ, ನಾಲ್ಕು ಕಣ್ಣು ಕರು ಜನನ

Vishwanath S
Updated On : 24 Aug 2013, 1:18 am

ಚನ್ನಪಟ್ಟಣ: ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರು ತಾಲೂಕಿನ ಸುಳ್ಳೇರಿ ಗ್ರಾಮದಲ್ಲಿ ಜನಿಸಿದ್ದು, ಸುತ್ತ ಮುತ್ತಲ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಗ್ರಾಮದ ರಮೇಶ್ ದೋತಯ್ಯ ಎಂಬುವರು ಸಾಕಿರುವ ಸೀಮೆಹಸು ಗುರುವಾರ ರಾತ್ರಿ ಈ ವಿಸ್ಮಯ ಕರುವಿಗೆ ಜನ್ಮ ನೀಡಿದ್ದು, ಇದ್ಯಾವುದೋ ದೇವರ ಪವಾಡ ಎಂದು ನಂಬಿರುವ ಗ್ರಾಮಸ್ಥರು ಕಳೆದ ರಾತ್ರಿಯಿಂದ ಕರುವಿಗೆ ಪೂಜೆ ಮಾಡುವ ಮೂಲಕ ಊರಿಗೆ ಯಾವುದೇ ಕೇಡಾಗದಿರಲಿ ಎಂದು ಭಗವಂತನ ಮೊರೆಹೋಗಿದ್ದಾರೆ. ಈ ಕರು ನೋಡಲು ಸುತ್ತ ಮುತ್ತಲ ಗ್ರಾಮಗಳಿಂದ ಜನತೆ ಆಗಮಿಸುತ್ತಿದ್ದಾರೆ.
ವಿಚಿತ್ರ ಕರುವಿಗೆ ಎರಡು ತಲೆಗಳಿದ್ದು ನಾಲ್ಕು ಕಣ್ಣು ಎರಡು ಕಿವಿ ಇದ್ದು, ಕರುವಿಗೆ ಒಂದೇ ದೇಹವಿದೆ. ಎರಡೂ ತಲೆಯ ಭಾಗ ಕೂಡಿಕೊಂಡಿದ್ದ ಕರು ಜೀವಂತವಾಗಿದೆ, ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಹಸುವಿನ ಮಾಲೀಕ ರಮೇಶ್ ತಿಳಿಸಿದ್ದಾರೆ.
ಭ್ರೂಣದಲ್ಲಿನ ಸಮಸ್ಯೆ: ಭ್ರೂಣದಲ್ಲಿನ ನ್ಯೂನತೆಯಿಂದಾಗಿ ಇಂತಹ ಕರುಗಳು ಜನಿಸುತ್ತವೆ. ಸಾವಿರದಲ್ಲಿ ಒಂದು ಇಂತಹ ಪ್ರಕರಣಗಳು ನಡೆಯುವ ಸಾಧ್ಯತೆ ಇರುತ್ತದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಪಶುವೈದ್ಯ ವಿಭಾಗದ ಉಪವ್ಯವಸ್ಥಾಪಕ ಡಾ.ಶ್ರೀಧರ್ ತಿಳಿಸಿದ್ದಾರೆ.
ಈ ಕರುವಿನ ಜನನಕ್ಕೆ ಯಾವುದೇ ಪವಾಡ ಕಾರಣವಾಗಿದ್ದು ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಅವರು ಕಳೆದ ಒಂದು ವರ್ಷದ ಹಿಂದೆ ತಾಲೂಕಿನ ನುಣ್ಣೂರು ಗ್ರಾಮದಲ್ಲಿ ಇಂತಹ ಕರು ಜನಿಸಿದ್ದು ಅದು ಗರ್ಭದಲ್ಲೇ ಸಾವಿಗೀಡಾಗಿತ್ತು ಎಂದು ತಿಳಿಸಿದ್ದಾರೆ.
ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರುಚನ್ನಪಟ್ಟಣ: ಅಸಮರ್ಪಕ ಚರಂಡಿಯಿಂದಾಗಿ ಗ್ರಾಮದ ಕೊಳಚೆ ನೀರು ರಸ್ತೆಯಲ್ಲಿ ಹರಿದು ಶಾಲಾ ಸಮೀಪದಲ್ಲಿ ನಿಂತು ಜನತೆ ಮೂಗು ಮುಚ್ಚಿ ತಿರುಗಾಡುವಂತಾಗಿರುವ ಪರಿಸ್ಥಿತಿ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಿರ್ಮಾಣಗೊಂಡಿದೆ.
ಗ್ರಾಮದಲ್ಲಿ ಲಕ್ಷಾಂತರ ರು. ವೆಚ್ಚ ಮಾಡಿ ಉತ್ತಮ ಚರಂಡಿ ನಿರ್ಮಾಣ ಮಾಡಲಾಗಿದೆಯಾದರೂ ಈಚರಂಡಿನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಚರಂಡಿಯಲ್ಲಿ ಹರಿಯ ಬೇಕಾದ ಕೊಳಚೆ ನೀರು ರಸ್ತೆ ಬದಿಯಲ್ಲಿ ಹರಿಯುತ್ತಿದ್ದು ಗ್ರಾಮದ ಮುಂಭಾಗದ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ.
ಚರಂಡಿ ನೀರು ನಿಲ್ಲುವ ಸ್ಥಳದಲ್ಲೇ  ಸರ್ಕಾರಿ ಪ್ರಾಥಮಿಕ ಶಾಲೆ ಇದ್ದು ಚರಂಡಿ ನೀರಿನಿಂದ ಸೊಳ್ಳೆ, ನೊಣ ಮೊದಲಾದ ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ಶಾಲಾಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು ಈಬಗ್ಗೆ ಗ್ರಾ.ಪಂ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಜನತೆಯನ್ನು ಡೆಂಘೀ ಭೀತಿ ಕಾಡುತ್ತಿದ್ದು ಮಾಲಿನ್ಯದಿಂದಲೇ ಡೆಂಘೀ ಹರಡುತ್ತದೆ ಎಂದು ಹೇಳುವ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಪಂಗೆ ಈಬಗ್ಗೆ ಮನವರಿಕೆ ಮಾಡಿ ಕೊಟ್ಟು ಕೃಷ್ಣಾಪುರ ಗ್ರಾಮಸ್ಥರು ಹಲವಾರು ತಿಂಗಳಿಂದ ಅನುಭವಿಸುತ್ತಾ ಬಂದಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement