ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮುತ್ತುರಾಯಸ್ವಾಮಿ, ಚೌಡೇಶ್ವರಿ ಕುಂಬಾಭಿಷೇಕ ಮಹೋತ್ಸವ ಇಂದು

Vishwanath S
Updated On : 24 Aug 2013, 12:55 pm

ನುಗ್ಗೇಹಳ್ಳಿ: ಇಲ್ಲಿಗೆ ಸಮೀಪದ ಕೆ.ತಿಮ್ಮಾಲಾಪುರದಲ್ಲಿ ಶ್ರೀ ಮುತ್ತುರಾಯಸ್ವಾಮಿ, ಚೌಡೇಶ್ವರಿ,  ಚಾಮುಂಡೇಶ್ವರಿ ದೇವಾಲಯಗಳ ಜೀರ್ಣೋದ್ಧಾರ, ಕುಂಬಾಭಿಷೇಕ ಮಹೋತ್ಸವ ಆ.24ರ ಸಂಜೆ 4ಕ್ಕೆ  ಆದಿಚುಂಚುನಗಿರಿ  ಮಠದ  ನಿರ್ಮಲಾನಂದನಾಥ ಸ್ವಾಮೀಜಿ  ನೇತೃತ್ವದಲ್ಲಿ ನಡೆಯಲಿದೆ ಎಂದು  ದೇವಾಲಯ ಸಮಿತಿ ಅಧ್ಯಕ್ಷೆ ಸುಮಿತ್ರ ಪ್ರಭಾಕರ್‌ಶಮಂತ ಗೌಡ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಸಮಾರಂಭ ಉದ್ಘಾಟಿಸಲಿದ್ದಾರೆ. ಚನ್ನಮ್ಮ ದೇವೇಗೌಡ ಚೌಡೇಶ್ವರಿ, ಚಾಮುಂಡೇಶ್ವರಿ ದೇವಾಲಯ ಉದ್ಘಾಟಿಸುವರು. ಮುತ್ತುರಾಯಸ್ವಾಮಿ ರಥಚಾಲನೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ನೆರವೇರಿಸಲಿದ್ದಾರೆ. ಇದೇ ವೇಳೆ ಸೋಲ್ಜರ್ ವಿಶೇಷ ಪತ್ರಿಕೆ ಬಿಡುಗಡೆಯಾಗಲಿದೆ.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ  ಎಚ್. ಡಿ. ಕುಮಾರಸ್ವಾಮಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂಡಳಿ ಅಧ್ಯಕ್ಷೆ ಪ್ರೇಮ ಕಾರಿಯಪ್ಪ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಸಿ.ಎನ್. ಬಾಲಕೃಷ್ಣ,  ಶಾಸಕ ವೈಎಸ್‌ವಿ ದತ್ತ, ರವಿ ಸುಬ್ರಮಣ್ಯ, ಶಾಸಕ ಷಡಕ್ಷರಿ, ಮಾಜಿ, ಉಪಸಭಾಪತಿ ಪುಟ್ಟಣ್ಣ ಹಾಸನ ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಜಿಪಂ ಸದಸ್ಯೆ ಕುಸುಮಾ ಬಾಲಕೃಷ್ಣ, ನಿವೃತ್ತ ಐಎಎಸ್ ಅಧಿಕಾರಿ ಕೆ. ಜಯರಾಜ್, ನಿವೃತ್ತ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡ, ಎಲ್.ಆರ್, ಶಿವರಾಮೇಗೌಡ,  ಶ್ರೀನಿವಾಸಮೂರ್ತಿ, ಬಿ.ಜಿ. ವಿಜಯ್, ಕರಾವೇ ಅಧ್ಯಕ್ಷ ನಾರಾಯಣಗೌಡ, ಕೆ.ಪಿ.ನಾಗೇಶ್, ಡಿ. ಮುನಿರಾಜ್, ಮುನಿರಾಜು ಆಗಮಿಸಲಿದ್ದಾರೆ.
ಸಂಜೆ 6ಕ್ಕೆ ಶ್ರೀವಾರಿ ಫೌಂಡೇಷನ್‌ನ ವೆಂಕಟೇಶ್‌ಮೂರ್ತಿ ನೇತೃತ್ವದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಮಹದೇವಪ್ಪ ಅವರಿಂದ ವೀರಗಾಸೆ ಸೋಮನ ಕುಣಿತ ನಂತರ ಗುಣಶೇಖರ ತಂಡದಿಂದ ನಾದಸ್ವರ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement