ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

2 ರಸ್ತೆ ಅಪಘಾತ: ಇಬ್ಬರು ಸಾವು

Vishwanath S
Updated On : 26 Aug 2013, 12:23 pm

ಚನ್ನರಾಯಪಟ್ಟಣ: ತಾಲೂಕಿನ ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ ನಡೆದ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಬೈಕಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಶ್ರವಣಬೆಳಗೊಳ ರಸ್ತೆಯ ಆಲದಮರ ಬಳಿ ನಡೆದಿದೆ. ತಾಲೂಕಿನ ಕಾಂತರಾಜಪುರ ಗ್ರಾಮದ ಲೋಹಿತಾಶ್ವ (26) ಮೃತಪಟ್ಟ ದುರ್ದೈವಿ. ಅವರು ಚನ್ನರಾಯಪಟ್ಟಣದಿಂದ ತಮ್ಮ ಊರಾದ ಜನಿವಾರಕ್ಕೆ ಹೋಗಲು ಚನ್ನರಾಯಪಟ್ಟಣ ಶ್ರವಣಬೆಳಗೊಳ ರಸ್ತೆಯ ಆಲದಮರದ ಹತ್ತಿರ ಟಿವಿಎಸ್ ವಿಕ್ಟರ್ ಬೈಕಿನಲ್ಲಿ ಹೋಗುತ್ತಿದ್ದು, ಎದುರಿನಿಂದ ಬಂದ ಟ್ರ್ಯಾಕ್ಟರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ಗಾಯಗೊಂಡ ಲೋಹಿತಾಶ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ  ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಲಾರಿ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಸಾವನ್ನಪ್ಪಿದ ಘಟನೆ ತಾಲೂಕಿನ ಹಿರೀಸಾವೆ  ಹೋಬಳಿಯ ಎಚ್.ಹೊನ್ನೇನಹಳ್ಳಿಯಲ್ಲಿ  ನಡೆದಿದೆ. ತಾಲೂಕಿನ ಎಚ್. ಹೊನ್ನೇನಹಳ್ಳಿ ಗ್ರಾಮದ ಮಂಜುಳ (45) ಮೃತಪಟ್ಟ ದುರ್ದೈವಿ.  
ಮಂಜುಳ ಅವರು ತೋಟದ ಕೆಲಸ ಮುಗಿಸಿಕೊಂಡು ವಾಪಸ್ಸು ಮನೆಗೆ ಬರಲು ಬಿ.ಎಂ.ರಸ್ತೆ ದಾಟುತ್ತಿದ್ದಾಗ ಹಿರೀಸಾವೆ ಕಡೆಯಿಂದ ಬಂದ ಲಾರಿ ರಾಂಗ್‌ಸೈಡ್‌ನಲ್ಲಿ ಬಂದು ರಸ್ತೆ ದಾಟುತ್ತಿದ್ದ ಮಂಜುಳ ಅವರಿಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ  ಮಂಜುಳ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ  ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಮಾರಾಟ: ಬಂಧನ
ಹಾಸನ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಮೊಸಳೆಹೊಸಳ್ಳಿ ಸಂತೆ ಮೈದಾನದ ಬಳಿ ಇರುವ ಪಶು ಆಸ್ಪತ್ರೆಯ ಮುಂಭಾಗ ನಡೆದಿದೆ. ತಾಲೂಕಿನ ಮಾರೇನಹಳ್ಳಿಯ ಕೃಷ್ಣಮೂರ್ತಿ (32), ಕುರುಬರಹಳ್ಳಿಯ ತೀರ್ಥಕುಮಾರ (26) ಎಂಬವರೇ  ಬಂಧಿತ ಆರೋಪಿಗಳು. ಈ ಇಬ್ಬರು ಮೊಸಳೆಹೊಸಳ್ಳಿ ಗ್ರಾಮದ ಸಂತೆ ಮೈದಾನದ ಹತ್ತಿರ ಇರುವ ಸರ್ಕಾರಿ ಪಶು ಆಸ್ಪತ್ರೆ ಮುಂಭಾಗದಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ  ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರಾಟ ಮಾಡುತ್ತಿದ್ದ 500 ರು. ಬೆಲೆಯ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿರುವ ಶಾಂತಿಗ್ರಾಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement