ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಆಹಾರ ಆದ್ಯತೆಗೆ ತಕ್ಕಂತೆ ದೊರೆಯಲಿ'

Vishwanath S
Updated On : 26 Aug 2013, 12:22 pm

ಹಾಸನ: ಎಲ್ಲಾ ಜನರಿಗೂ ಎಲ್ಲಾ ಕಾಲಕ್ಕೂ ಕ್ರಿಯಾಶೀಲ ಮತ್ತು ಆರೋಗ್ಯಕರ ಜೀವನ ನಡೆಸಲು ಆಹಾರ ಪದಾರ್ಥ್ಥಸಾಕಷ್ಟು ಪ್ರಮಾಣದಲ್ಲಿ ಆದ್ಯತೆಗೆ ತಕ್ಕಂತೆ ದೊರೆಯಬೇಕು ಎಂದು ತಾಲೂಕು  ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಎ.ಜೆ.ಕೃಷ್ಣೇಗೌಡ ಅವರು ಅಭಿಪ್ರಾಯಪಟ್ಟರು.
ಕೇಂದ್ರ ಕ್ಷೇತ್ರ  ಪ್ರಚಾರ ನಿರ್ದೇಶನಾಲಯ, ಶಿಶು ಅಭಿವೃದ್ಧಿ  ಯೋಜನೆ, ಜೀವನಾಧಾರ ಸೇವಾ ಕೇಂದ್ರ ಆಶ್ರಯದಲ್ಲಿ ತಾಲೂಕಿನ   ಕೋರವಂಗಲ ಶಾಲಾ ಆವರಣದಲ್ಲಿ  ಏರ್ಪಡಿಸಿದ್ದ ಭಾರತ ನಿರ್ಮಾಣ- ನಾನಾ  ಯೋಜನೆಗಳ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಹಸಿವು ಮುಕ್ತ ಭಾರತ ನಿರ್ಮಾಣ ಮಾಡಲು ಸರ್ಕಾರಗಳು ಹಲವಾರು ಯೋಜನೆಗಳ ಮೂಲಕ ಬಡ ಜನರ ಹಸಿವನ್ನು ತಡೆಗಟ್ಟಲು ಸರ್ಕಾರ ನಿಗದಿಪಡಿಸಿದ ದರದಲ್ಲಿ ಆಹಾರ ಪದಾರ್ಥಗಳನ್ನು ಸಂಬಂಧಿಸಿದ ಇಲಾಖೆಯ ಮೂಲಕ ಸಮರ್ಪಕ ರೀತಿಯಲ್ಲಿ ವಿತರಿಸುತ್ತಿದ್ದು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ಆರ್ಥಿಕವಾಗಿ ಹಿಂದುಳಿದ ಜನತೆಗೆ ಸರ್ಕಾರ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿರುವುದರಿಂದ  ಬಡ ಜನತೆ ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಹಸಿವನ್ನು ನೀಗಿಸಿಕೊಳ್ಳಬಹುದು ಎಂದರು.
ಸಾರ್ವಜನಿಕ  ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಟಿ. ಉದಯ್ ಮಾತನಾಡಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಆಧಾರ್ ಕಾರ್ಡ್  ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡುತ್ತಿದ್ದು, ಭಾರತೀಯ ಪ್ರಜೆ ಎಂಬ ಗುರುತು ದೊರಕುವುದಲ್ಲದೆ  ಸರ್ಕಾರದ ಹಲವಾರು ಯೋಜನೆಗಳನ್ನು ಈ ಆಧಾರ್ ಕಾರ್ಡ್ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.
ನೇರ ನಗದು ವರ್ಗಾವಣೆಗೆ ಆಧಾರ್ ಸಂಖ್ಯೆಯನ್ನು ಸಂಪರ್ಕ ಕಲ್ಪಿಸುವ ಮೂಲಕ ಅವರ ವೈಯುಕ್ತಿಕ ಖಾತೆಗೆ ಹಣ ಜಮೆಯಾಗುತ್ತಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಬಹುದಾಗಿದೆ ಎಂದರು.
ಜೀವನಾಧಾರ ಸೇವಾ  ಕೇಂದ್ರದ ನಿರ್ದೇಶಕಿ ಸಿಸ್ಟರ್ ಬನ್ನಿ ಮಾತನಾಡಿ, ನಗರೀಕರಣ, ಕೈಗಾರಿಕೀಕರಣದಿಂದಾಗಿ ಇಂದು ಕೃಷಿ ಪ್ರದೇಶವು ಕಡಿಮೆಯಾಗುತ್ತಿದ್ದು, ರೈತರು ಕೃಷಿಯತ್ತ ಹೆಚ್ಚು ಒಲವು ತೋರಲು  ಸರ್ಕಾರವು ಹೊಸದಾಗಿ ಭೂಸ್ವಾಧೀನ  ವಿಧೇಯಕ ಜಾರಿಗೆ ತಂದಿದೆ ಎಂದರು.
ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಪ್ರಕಾಶ್ಪ್ರ್‌ಸ್ತಾವಿಕ  ಭಾಷಣ ಮಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತೇಗೌಡ ಅಧ್ಯಕ್ಷತೆ ವಹಿಸಿದ್ದರು.  ಅಂಗನವಾಡಿ ಕಾರ್ಯಕರ್ತೆ ಸುಮ, ಶಿಕ್ಷಕ  ಪುಟ್ಟಣ್ಣಯ್ಯ, ರಾಮರಾಜ್, ಪೂರ್ಣಿಮ, ಸೇವಾ ಕೇಂದ್ರದ ಹೆಲೆನ್ ಇದ್ದರು. ಮುನಿರಾ ಬೇಗಂ ಸ್ವಾಗತಿಸಿ ಗೀತಾ ವಂದಿಸಿದರು. ಮಹಿಳೆಯರಿಗೆ ನಾನಾ ಸ್ಪರ್ಧೆಗಳನ್ನು  ಏರ್ಪಡಿಸಿ ಬಹುಮಾನ ವಿತರಿಸಲಾಯಿತು  ಹಾಗೂ ಜಾಥಾ  ಹಮ್ಮಿಕೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement