ಗಣೇಶೋತ್ಸವ ಸಮಿತಿ ಮನವಿ
ಅರಕಲಗೂಡು: ಪ್ರಸನ್ನ ಗಣಪತಿ ಸೇವಾ ಸಮಿತಿಯು ಇಲ್ಲಿನ ಅ.ನ.ಕೃ ಗೆಳೆಯರ ಬಳಗದಿಂದ ಪ್ರತಿ ವರ್ಷ ಗಣೇಶೋತ್ಸವ ನಡೆಸುತ್ತಾ ಬಂದಿದ್ದು, ಪ್ರಸಕ್ತ ವರ್ಷ ಗಣೇಶೋತ್ಸವ ನಡೆಸಲು ಸದರಿ ಸದಸ್ಯರು ವಿವಿಧ ವೈಯಕ್ತಿಕ ಕಾರಣಗಳಿಂದ ಸಾಧ್ಯವಾಗುತ್ತಿಲ್ಲವಾದ ಕಾರಣ ಆಸಕ್ತ ಸಾರ್ವಜನಿಕರು ಮತ್ತು ಸಂಘದ ಸದಸ್ಯರುಗಳು ಬದಲೀ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಹಾಗೂ ಈವರೆಗೆ ತಮ್ಮೊಂದಿಗೆ ಸಹಕರಿಸಿದ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ದಾನಿಗಳು ಮತ್ತು ಕಲಾವಿದರಿಗೆ ಅನಕೃ ಗೆಳೆಯರ ಬಳಗದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿ ವೇತನಕ್ಕೆಅರ್ಜಿ ಆಹ್ವಾನ
ಹಾಸನ: ಜಿಲ್ಲೆಯ ಪದವಿ ಪೂರ್ವ, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಪದವಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ಮತ್ತು ಪಶುವೈದ್ಯಕೀಯ, ಸ್ನಾತ್ತಕೋತ್ತರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಇತ್ಯಾದಿ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬೇಕಾಗಿದೆ. ಇದಕ್ಕಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗುತ್ತಿದೆ. ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲೇಜುಗಳ ಹಾಗೂ ಕೋರ್ಸ್ಗಳ ವಿವರಗಳ ಅಗತ್ಯವಿದೆ. ಆದಕಾರಣ, ರಾಜ್ಯದ ಎಲ್ಲ ಕಾಲೇಜುಗಳ ಪ್ರಾಂಶುಪಾಲರು, ಕಾಲೇಜುಗಳ ರಿಜಿಸ್ಟ್ರೇಷನ್ ನಂ, ಅಫಿಲಿಯೇಷನ್ ನಂ, ಪೂರ್ಣ ವಿಳಾಸ, ಪ್ರಾಂಶುಪಾಲರ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ವೆಬ್ಸೈಟ್ (ಇದ್ದಲ್ಲಿ) ಕಾಲೇಜಿನ ಬ್ಯಾಂಕ್ ಖಾತೆ, ಐ.ಎಫ್.ಎಸ್.ಸಿ, ಕೋಡ್ ಬೋಧಿಸಲಾಗುತ್ತಿರುವ (ಮಾನ್ಯತೆ ಪಡೆದ) ಕೋರ್ಸುಗಳು ಮಾಹಿತಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆಯ ವೆಬ್ ಪೋರ್ಟಲ್ ಡಿಡಿಠಣಣ್ಞಛ್ಠಜಠಛಡಡ. ್ಛ್ಜ್ಜ.್ಜ್ಟಢ.್ಝಟಿ ರಲ್ಲಿ ಅಪ್ಲೋಡ್ ಮಾಡಲು ಕೋರಿದೆ. ಇದುವರೆಗೆ ಅಪ್ಲೋಡ್ ಮಾಡದ ಕಾಲೇಜಿನ ಪ್ರಾಂಶುಪಾಲರು, ತಮ್ಮ ಕಾಲೇಜಿನ ಯೂಸರ್-ಐಡಿ ಮತ್ತು ಪಾಸ್ವರ್ಡ್ಗಳನ್ನು ಹಾಗೂ ಇತರೆ ವಿವರಗಳನ್ನು ಹಾಸನ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಿ ಪಡೆದು, 31-08-2013ರೊಳಗಾಗಿ ತಪ್ಪದೇ ಅಪ್ಲೋಡ್ ಮಾಡಲು ಕೋರಲಾಗಿದೆ. ಹೊಸದಾಗಿ ಯೂಸರ್ಐಡಿ ಮತ್ತು ಪಾಸ್ವರ್ಡ್ಗಳ ಅಗತ್ಯ ಇರುವ ಕಾಲೇಜು ಪ್ರಾಂಶುಪಾಲರು ಕಾಲೇಜಿನ ಅಫಿಲಿಯೇಷನ್ ನಂ, ಮತ್ತು ಮಾನ್ಯತೆ ಪಡೆದ ಕೋರ್ಸುಗಳ ಕುರಿತು ಆದೇಶಗಳ ಸ್ಕ್ಯಾನ್ ಪ್ರತಿಗಳೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿ, ಬೆಂ.ಇವರ ಇ-ಮೇಲ್ ಛ್ಛಿಜಛಿಟ್ಜಿಣ ್ಞಛ್ಠ.ಟ್ಝ್ಛಿ.್ಝಟಿ ವಿಳಾಸಕ್ಕೆ ಪತ್ರವನ್ನು ಕಳುಹಿಸಬಹುದು.
ಹಸು ಪ್ರಾಣ ಕಾಪಾಡಲು ಹೋಗಿ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು
ಹಾಸನ: ಕೆರೆಯಲ್ಲಿ ಮುಳುಗುತ್ತಿದ್ದ ಹಸುವನ್ನು ಕಾಪಾಡಲು ಹೋಗಿ ವ್ಯಕ್ತಿಯೊಬ್ಬ ತಾನೇ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ತಾಲೂಕಿನ ಹಾಲುಬಾಗಿಲು ಸಮೀಪ ತಟ್ಟೆಕೆರೆ ಗ್ರಾಮದ ವಾಸಿ ಶಿವಣ್ಣ (45) ದೊಡ್ಡಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ.
ಇದೇ ಗ್ರಾಮದ ಕೃಷ್ಣ ಎಂಬುವರು ತಮ್ಮ ಹಸುವನ್ನು ಕೆರೆಯ ಬದಿ ತೊಳೆಯುತ್ತಿದ್ದಾಗ ಹಸು ಕೆರೆಯೊಳಗೆ ಹೋದಾಗ ಮುಳುಗಲು ಪ್ರಾರಂಭಿಸಿದೆ.
ಕೆರೆಯಲ್ಲಿ ಮುಳುಗುತ್ತಿದ್ದ ಹಸುವನ್ನು ಕಾಪಾಡಲು ಹೋಗಿ ಮೃತಪಟ್ಟಿದ್ದಾರೆ. ಕೆರೆಯೊಳಗೆ ಸಿಲುಕಿದ್ದ ಹಸು ಕೂದಲೆಳೆಯಲ್ಲಿ ಪ್ರಾಣಾಪಯದಿಂದ ಪಾರಾಗಿದೆ.
ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಶವ ಪತ್ತೆ ಕಾರ್ಯ ನಡೆಸಿದರು.
ಉತ್ತಮ ಗುಣದಿಂದ ಜ್ಞಾನ ವೃದ್ಧಿ: ಶ್ರೀ
ಹಾಸನ: ಮನುಷ್ಯನನ ಜ್ಞಾನ ವೃದ್ಧಿ ಆಗಬೇಕಾದರೆ ಉತ್ತಮ ಗುಣ ಬೆಳೆಸಿಕೊಳ್ಳಬೇಕು ಎಂದು ಪುಷ್ಪಗಿರಿ ಮಹಾ ಸಂಸ್ಥಾನದ ಸೋಮಶೇಖರ ಸ್ವಾಮೀಜಿ ತಿಳಿಸಿದರು. ನಗರದ ಹೊಸಲೈನ್ ರಸ್ತೆ ಬಳಿ ಪುಷ್ಪಗಿರಿ ವಿಜ್ಞಾನ ಪಿಯು ಕಾಲೇಜ್ (ಎಸ್.ಪಿ.ಎಂ.) ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯನಾದವನು ಸತ್ಯವನ್ನು ನುಡಿಯಬೇಕು. ತಾನು ಮಾಡುವಂತ ಕೆಲಸದಲ್ಲಿ ಮತ್ತೊಬ್ಬರಿಗೆ ಯಾವುದೆ ತೊಂದರೆ ಆಗದ ರೀತಿಯಲ್ಲಿ ನಿರ್ವಹಿಸಿದರೆ ಸಮಾಜದಲ್ಲಿ ಉತ್ತಮವಾದ ತಿಳಿ ವಾತಾವರಣ ನಿರ್ಮಾಣವಾಗುತ್ತದೆ ಎಂದು ಸಲಹೆ ನೀಡಿದರು. ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸಿದರೆ ಗುರಿ ಮುಟ್ಟಲು ಸಾಧ್ಯ ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ತಮ್ಮ ಅಮುಲ್ಯವಾದ ಈ ಸಮಯವನ್ನು ಓದುವಿನ ಕಡೆ ಗಮನ ನೀಡಿ ದೇಶದಲ್ಲಿ ಉತ್ತಮ ಪ್ರಜೆ ಆಗಬೇಕು. ಮನುಷ್ಯ ತನ್ನ ಬದುಕಿನಲ್ಲಿ ಒಳ್ಳೆಯ ಕಾಯಕವನ್ನು ಅಳವಡಿಸಿಕೊಳ್ಳಬೇಕೆಂದು ಇದೆ ವೇಳೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪುಷ್ಪಗಿರಿ ಮಾಹಾ ಸಂಸ್ಥಾನದ ಅಧ್ಯಕ್ಷ ಶಿವರುದ್ರಪ್ಪ, ಕಾಲೇಜಿನ ಪ್ರಾಂಶುಪಾಲ ಉಮೇಶ್, ಕಾರ್ಯದರ್ಶಿ ರಾಜಶೇಖರಯ್ಯ, ಸಂಸ್ಥೆ ನಿರ್ದೇಶಕ ಬಸವರಾಜಪ್ಪ, ಇತರರು ಇದ್ದರು.
ಆಂಜನೇಯನಾಮಬಲದಿಂದ ದುಷ್ಟಶಕ್ತಿ ದೂರ
ಹಾಸನ: ಒಂದು ಬಾರಿ ಆಂಜನೇಯನ ಹೆಸರು ಹೇಳಿದರೆ ಸಾಕು, ಎಲ್ಲ ದುಷ್ಟಶಕ್ತಿಗಳು ದೂರಾಗಲಿವೆ ಎಂದು ಬೆಲಗೂರು ವೀರಪ್ರತಾಪಾಂಜನೇಯಸ್ವಾಮಿ ಕೃಪಾಪೂತ ಬಿಂದುಮಾಧವ ಸ್ವಾಮೀಜಿ ಹೇಳಿದ್ದಾರೆ. ತಾಲೂಕಿನ ಶಾಂತಿಗ್ರಾಮ ಹೋಬಳಿಯ ಹೊಂಗೆರೆ ರಸ್ತೆ ಬಳಿ ಇರುವ ಆದಿ ಹನುಮಂತರಾಯಸ್ವಾಮಿ ದೇಗುಲದ ಜೀರ್ಣೋದ್ಧಾರ ಸಮಿತಿಯಿಂದ ಏರ್ಪಡಿಸಲಾಗಿದ್ದ ದೇವಾಲಯದ ರಾಜಗೋಪುರ ಶಿಖರ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯನಾದವನಿಗೆ ಜೀವನದಲ್ಲಿ ಭಕ್ತಿ ಎಂಬ ಜ್ಞಾನ ಇದ್ದರೆ ತಮ್ಮ ಗುರಿ ತಲುಪಬಹುದೆಂದು ಹೇಳಿದರು. ವಿಶೇಷವಾದ ಈ ದೇವಾಲಯ ಸ್ಥಳವು ಪುಣ್ಯಕ್ಷೇತ್ರವಾಗಿ, ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಮಾರ್ಪಡಲಿದೆ. ನಿರ್ಮಿಸಲಾಗಿರುವ ಆದಿ ಹನುಮಂತರಾಯಸ್ವಾಮಿ ವಿಗ್ರಹದಲ್ಲಿ ಎಲ್ಲಾ ದುಷ್ಟಶಕ್ತಿ ಹೋಗಲಾಡಿಸುವ ಒಂದು ವಿಶೇಷತೆ ಕಂಡು ಬರುತ್ತಿದೆ ಎಂದು ಹೇಳಿದರು. ದೇವಾಲಯದ ರಾಜಗೋಪುರ ಶಿಖರ ಪ್ರತಿಷ್ಠಾಪನಾ ಅಂಗವಾಗಿ ಶನಿವಾರ ಬೆಳಗ್ಗೆ 7 ಕ್ಕೆ ಗಂಗಾ ಪೂಜೆ, ಗೋ ಪೂಜೆ ನೆರವೇರಿಸಲಾಯಿತು. ಆಂಜನೇಯನ ಮೂಲಮಂತ್ರ ಹೋಮ, ಮಹಾಪೂರ್ಣಾಹುತಿ, ಮಹಾ ಮಂಗಳಾರತಿ ಹಾಗೂ ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಧರ್ಮಗುರು ಆಲ್ಬನ್ ಪುರ್ಟ್ ಡೋ ನಿಧನ
ಅರಸೀಕೆರೆ: ಪಟ್ಟಣದ ಸಂತಮರಿಯ ದೇವಾಲಯದ ಧರ್ಮಗುರು ಆಲ್ಬನ್ ಪುರ್ಟ್ ಡೋ(70) ಶನಿವಾರ ರಾತ್ರಿ ವಿಧಿವಶರಾಗಿದ್ದಾರೆ. ಇವರು ಈ ಹಿಂದೆ ಚಿಕ್ಕಮಗಳೂರು ಕ್ರೈಸ್ತ ಧರ್ಮಕ್ಷೇತ್ರದ ಅನೇಕ ಧರ್ಮಕೇಂದ್ರಗಳಲ್ಲಿ ಧರ್ಮಗುರುವಾಗಿ 43 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರು. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಅಂತ್ಯ ಸಂಸ್ಕಾರವನ್ನು ಸೋಮವಾರ ಮಧ್ಯಾಹ್ನ 11.30ಕ್ಕೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಾಸನದ ಸಂತ ಅಂಥೋಣಿಯವರ ದೇವಾಲಯದಲ್ಲಿ ನೆರವೇರಿಸಲಾಗುವುದು. ಧರ್ಮಗುರುಗಳ ನಿಧನಕ್ಕೆ ಸಂತಮರಿಯ ದೇವಾಲಯದ ಭಕ್ತಾದಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಶಂಭುಲಿಂಗೇಶ್ವರ ಕುಂಭಾಭಿಷೇಕ ಇಂದು
ಗಂಡಸಿ: ಶಂಭುಲಿಂಗೇಶ್ವರ ಸ್ವಾಮಿಯ ಕುಂಭಾಭಿಷೇಕ ಮಹೋತ್ಸವ ಆ.26ರಂದು ನಡೆಯಲಿದೆ. ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯ ಸಮ್ಮುಖದಲ್ಲಿ ಪುರಾತನ ಕ್ಷೇತ್ರನಾಥ ಶಂಭುಲಿಂಗೇಶ್ವರಸ್ವಾಮಿಯ ಉದ್ಭವ ದಿವ್ಯ ಮೂರ್ತಿಯ ರುದ್ರಾಭಿಷೇಕ, ಸಹಸ್ರನಾಮ, ಬಿಲ್ವಾರ್ಚನೆ, ಸಹಸ್ರಕುಂಭಗಳಿಂದ ಜಲಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗ ಪಾತ್ರರಾಗುವಂತೆ ದೇವಸ್ಥಾನದವರು ಕೋರಿದ್ದಾರೆ.
ನ್ಯಾಫೆಡ್ ಕೊಬ್ಬರಿ ಖರೀದಿ ಕೇಂದ್ರ
ಜಾವಗಲ್: ಜಾವಗಲ್ ಹಳೇಬೀಡು ಹೋಬಳಿ ತೆಂಗು ಬೆಳೆಗಾರರ ಅನುಕೂಲಕ್ಕಾಗಿ ಅರಸೀಕೆರೆ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರದಿಂದ ಪ್ರತ್ಯೇಕ ನ್ಯಾಫೆಡ್ ಕೊಬ್ಬರಿ ಖರೀದಿ ಕೇಂದ್ರವನ್ನು ತೆರೆಯಲಾಗುವುದೆಂದು ಎಪಿಎಂಸಿ ನಿರ್ದೇಶಕ ಮತ್ತು ಹಳೇಬೀಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ನಾಗರಾಜು ತಿಳಿಸಿದ್ದಾರೆ.