ಜಾವಗಲ್ ಪಪೂ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಜಾವಗಲ್: ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ ದೊರಕಿದೆ.
ಜಾವಗಲ್ನಲ್ಲಿ ನಡೆದ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಬಾಲಕ, ಬಾಲಕಿಯರು ವಿವಿಧ ಅಟೋಟಗಳು, ಪಂದ್ಯಾವಳಿಗಳಲ್ಲಿ ಗೆದ್ದು ಒಟ್ಟು 77 ಅಂಕ ಗಳಿಸಿ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು.
75 ಅಂಕ ಗಳಿಸಿದ ಜಾವಗಲ್ನ ಮಾಡಲ್ ಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ತಾಪಂ ಸದಸ್ಯೆ ರಾಜೇಶ್ವರಿ ಶಿವಾನಂದ ಮಾತನಾಡಿ, ಸೋಲು ಗೆಲವಿನ ಮೆಟ್ಟಿಲಾಗಿದ್ದು ಸತತ ಪ್ರಯತ್ನ, ಅಭ್ಯಾಸದಿಂದ ಗೆಲವು ಸಾಧಿಸುವುದು ಸುಲಭ ಎಂದರು.
ಕೋಳಗುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಲತಾ.ಕೆ.ವಿ ವೈಯಕ್ತಿಕ ವಿಭಾಗದ ಪ್ರಶಸ್ತಿ ಪಡೆದುಕೊಂಡರು. ಬಾಲಕರ ವಿಭಾಗದಲ್ಲಿ ಜಾವಗಲ್ನ ಮಾಡಲ್ ಶಾಲೆಯ ನಡಾಫ್ ಜಾಕೀರ್ಹುಸೇನ್ ಮತ್ತು ಅಂಬೇಡ್ಕರ್ ಪ್ರೌಢಶಾಲೆಯ ಮಂಜಾನಾಯ್ಕ ವೈಯಕ್ತಿಕ ವಿಭಾಗದ ಪ್ರಶಸ್ತಿ ಹಂಚಿಕೊಂಡರು. ತಾಪಂ ಸದಸ್ಯೆ ಲಕ್ಷ್ಮೀರವಿಶಂಕರ್, ಗ್ರಾಪಂ ಅಧ್ಯಕ್ಷೆ ಕವಿತಾಮಂಜುನಾಥ್, ಉಪಪ್ರಾಂಶುಪಾಲ ಯೋಗೀಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ರುದ್ರೇಶ್, ಮುಖ್ಯ ಶಿಕ್ಷಕರಾದ ಪುಟ್ಟಚನ್ನೇಗೌಡ, ಪ್ರಸನ್ನಕುಮಾರ್, ಅಧ್ಯಾಪಕವರ್ಗದವರು, ಜಾವಗಲ್ ವಸಂತಕುಮಾರ್, ಶಿವಶಂಕರ ಇದ್ದರು.