ನಾಡಿನ ಪರಂಪರೆ ಮರೆಯಬೇಡಿ: ತಹಶೀಲ್ದಾರ್ ಕೇಶವಮೂರ್ತಿ
ಜಾವಗಲ್: ನಾಡಿನ ಪರಂಪರೆಯನ್ನು ಯಾರೂ ಮರೆಯಬಾರದೆಂದು ತಹಸೀಲ್ದಾರ್ ಕೇಶವಮೂರ್ತಿ ಅಭಿಪ್ರಾಯಪಟ್ಟರು.
ಶನಿವಾರ ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳ್ಳಿಮಂಡಲ ಜಿಲ್ಲಾಸಮಿತಿ ಹಾಸನ, ಆದರ್ಶ ಸುಗಮಸಂಗೀತ ಅಕಾಡೆಮಿ ಬೆಂಗಳೂರು ಮತ್ತು ಕರ್ನಾಟಕ ಸುಗಮಸಂಗೀತ ಪರಿಷತ್ ಬೆಂಗಳೂರು, ಇವರ ಸಹಯೋಗದಲ್ಲಿ ಕನ್ನಡ ನಿತ್ಯೋತ್ಸವ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಇಓ ಎಸ್.ಪಿ.ನಟರಾಜು, ಪ್ರಾಂಶುಪಾಲ ವಸಂತರಾಜ್ ಅರಸ್ , ಉಪಪ್ರಾಂಶುಪಾಲ ಯೋಗೀಶ್, ತಾಪಂ ಸದಸ್ಯೆ ಲಕ್ಷ್ಮೀರವಿಶಂಕರ್, ಬೆಳ್ಳಿಮಂಡಲ ಜಿಲ್ಲಾಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಆದರ್ಶ ಸುಗಮಸಂಗೀತ ಅಕಾಡೆಮಿ ಬೆಂಗಳೂರು, ಸುಗಮಸಂಗೀತ ಪರಿಷತ್ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್, ಉಪತಹಸೀಲ್ದಾರ್ ಅಶೋಕ್, ಪಿಡಿಓ ಚಂದ್ರಶೇಖರ್ ಮತ್ತಿತರರಿದ್ದರು.