ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮುಂದೆ ಕೆಲವೇ ಭಾಷೆಗಳು ಜೀವಂತ

Vishwanath S
Updated On : 26 Aug 2013, 12:22 pm

ಕ.ಪ್ರ.ವಾರ್ತೆ ,  ಹಾಸನ ,  ಆ.25
ಮುಂದಿನ ದಿವಸಗಳಲ್ಲಿ ಕೆಲವೆ ಭಾಷೆಗಳು ಮಾತ್ರ ಜೀವಂತವಾಗಿ ಉಳಿಯುತ್ತವೆ ಎಂದು ಲೆಕ್ಕ ಪರಿಶೋಧಕ  ಎಸ್.ಕೆ. ಸತ್ಯನಾರಾಯಣ್ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಸರ್ವಭಾಷಾ ಸರಸ್ವತಿ ವೇದಿಕೆ, ಸಂಸ್ಕೃತ ವಿಭಾಗದಿಂದ ಏರ್ಪಡಿಸಲಾಗಿದ್ದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಜ್ಯೋತಿ ಬೆಳಗುವುದರ ಮೂಲಕ ನೆರವೇರಿಸಿ ಮಾತನಾಡಿದರು.
ಹಿಂದಿನಿಂದ ಬಂದಂತಹ ಎಷ್ಟೋ ಭಾಷೆಗಳು ಈಗಾಗಲೇ ನಶಿಸಿ ಹೋಗುತ್ತಿದೆ. ಮುಂದಿನ ದಿವಸಗಳಲ್ಲಿ ಚಾಲ್ತಿಯಲ್ಲಿರುವ ಭಾಷೆಗಳು ಕೂಡ ಅಳಿವಿನ ಅಂಚಿನಲ್ಲಿ ಸಿಲುಕುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಕೆಲವೆ ಭಾಷೆಗಳು ಮಾತ್ರ ಉಳಿಯಲಿದೆ ಎಂದರು.
 ಸಂಸ್ಕೃತ ಭಾಷೆ ಸತ್ತು ಹೋದ ಭಾಷೆಯಲ್ಲ. ಇದಕ್ಕೆ ತನ್ನದೆ ಆದ ಇತಿಹಾಸವಿದ್ದು, ಜೀವಂತವಾಗಿ ಉಳಿದು ಆವಿಷ್ಕಾರ ಮಾಡಲಿದೆ ಎಂದು ಹೇಳಿದರು.  ಸಂಸ್ಕೃತ ಭಾಷೆ ಗಟ್ಟಿಯಗಿ ಉಳಿಯುವ ಹಾಗೂ ಕಲಿಕೆಯಿಂದ ಜೀವನ ನೀಡುವ ಭಾಷೆಯಾಗಿದೆ ಎಂದರು.
ಈಗ ಸಂಸ್ಕೃತ ಭಾಷೆ ಕಲಿಯುವರ ಸಂಖ್ಯೆ ಕಡಿಮೆ ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿವಸಗಳಲ್ಲಿ ಸರ್ಕಾರವು ಸಂಸ್ಕತ ಕಲಿಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.
 ಕಾಲೇಜಿನ ಪ್ರಾಂಶುಪಾಲ  ಐ.ಎಂ. ಮೋಹನ್, ಸಂಸ್ಕೃತ ಶಿಬಿರದ ರಕ್ಷಿತಾ ಭಾರದ್ವಾಜ್, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಎಚ್.ಎನ್. ವೀಣಾ, ಇತಿಹಾಸ ವಿಭಾಗದ ಉಪನ್ಯಾಸಕಿ ವಿದ್ಯಾ ಇತರರು ಇದ್ದರು.  ಶಿವಕುಮಾರ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement