ಪುಣ್ಯಕೋಟಿ ಕಥೆ ಸಾರುವ ಸ್ತಬ್ಧಚಿತ್ರ, ಭವ್ಯ ಮೆರವಣಿಗೆ
ಕ.ಪ್ರ.ವಾರ್ತೆ , ಅರಸೀಕೆರೆ , ಆ. 26
ಮನೆಗೊಂದು ಹಸು, ಊರಿಗೊಂದು ಗೋಶಾಲೆ ಎನ್ನುವ ಘೋಷಣೆಯೂಂದಿಗೆ ವಿನೂತನ ಮೆರವಣಿಗೆಯನ್ನು ಭಾನುವಾರ ಪಟ್ಟಣದ ಜೈನ ಸಮುದಾಯ ಧರ್ಮ ಗುರು, ಕೃಷ್ಣಗಿರಿ ಪೀಠಾಧಿಪತಿ ಡಾ.ವಸಂತ ವಿಜಯಜೀ ಮಹಾರಾಜರ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮೆರವಣಿಗೆಯನ್ನು ಜೈನ್ ದೇವಸ್ಥಾನದಿಂದ ಆರಂಭಿಸಿ ಗ್ರಂಥಾಲಯ ರಸ್ತೆ, ರಾಘವೇಂದ್ರ ಮಠದ ರಸ್ತೆ, ಪೇಟೆ ಬೀದಿ, ರಾಷ್ಟ್ರೀಯ ಹೆದ್ದಾರಿ ಮೂಲಕ ಸರ್ಕಾರಿ ಆಸ್ಪತ್ರೆಯ ಬಳಿ ಮೆರವಣಿಗೆ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಪುಣ್ಯಕೋಟಿ ಕಥೆಯನ್ನು ಸಾರುವ ಸ್ತಬ್ಧಚಿತ್ರ, ಆನೆಯ ಮೆರವಣಿಗೆ, ವಿವಿಧ ಜಾನಪದ ಕಲಾತಂಡಗಳು ಗಮನ ಸೆಳೆದವು. ಜೈನ ಸಮುದಾಯದ ಮುಖಂಡರು, ಯುವಕರು ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆ ಮೆರವಣಿಗೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಿತ್ತು.