ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೈತ್ರಿ ಮಾಡಿಕೊಂಡು ಅಪವಿತ್ರ: ಶಾಸಕ ರುದ್ರೇಶಗೌಡ ಲೇವಡಿ

Vishwanath S
Updated On : 27 Aug 2013, 12:47 pm

ಕನ್ನಡಪ್ರಭ ವಾರ್ತೆ ,  ಬೇಲೂರು ,  ಆ. 26
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಅನ್ನು ಬಗ್ಗು ಬಡಿಯುವ ಜೆಡಿಎಸ್, ಬಿಜೆಪಿ ತಂತ್ರಗಾರಿಕೆಗೆ ಮತದಾರ ಬೆಲೆ ನೀಡದೆ ಕಾಂಗ್ರೆಸ್ಸನ್ನು ಕೈ ಹಿಡಿದಿದ್ದಾನೆ ಎಂದು ಶಾಸಕ ವೈ.ಎನ್.ರುದ್ರೇಶಗೌಡ ಹೇಳಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ ವೇಳೆ ಮಾತನಾಡಿದ ಅವರು, ಮೈತ್ರಿ ಕೈಕೊಟ್ಟು ಅಪವಿತ್ರವಾಗಿದ್ದಾರೆ. ರಾಜಕಾರಣದಲ್ಲಿ ಏನೆಲ್ಲಾ ಮೇಲಾಟಗಳಿದ್ದರೂ ಒಂದು ಪಕ್ಷವನ್ನು ಉದ್ದೇಶಪೂರ್ವಕವಾಗಿ ಸೋಲಿಸಲೆಂದೇ ಹೊರಡುವುದು ರಾಜಕಾರಣದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಇದು ದೇಶದ ಅಭಿವೃದ್ಧಿ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಈ ಚುನಾವಣೆ ಕಾಂಗ್ರೆಸ್ ವಿರೋಧಿಗಳಿಗೆ ಎಚ್ಚರಿಕೆ ಗಂಟೆಯಾಗಿದ್ದು ಮುಂದಿನ ಲೋಕಸಭಾ ಚುನಾವಣೆಗೆ ಮತದಾರರು ಕಾಂಗ್ರೆಸ್ ಬಲಪಡಿಸಲಿದ್ದಾರೆ ಎಂಬುದಕ್ಕೆ ದಿಕ್ಸೂಚಿ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಟಿ.ದಾಮೋದರ್ ಮಾತನಾಡಿ, ಜೆಡಿಎಸ್ ಹಾಗೂ ಬಿಜೆಪಿ ಯೋಜನೆಗೆ ಮತದಾರ ತಕ್ಕಪಾಠ ಕಲಿಸಿದ್ದಾರೆ. ಇನ್ನು ಮುಂದಾದರೂ ಮತ್ತೊಂದು ಪಕ್ಷವನ್ನು ಉದ್ದೇಶಪೂರ್ವಕವಾಗಿ ತುಳಿಯಲಿಕ್ಕೆ ಪ್ರಯತ್ನಿಸುವುದು ಬಿಡಲಿ ಎಂದು ಸಲಹೆ ನೀಡಿದರು. ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿದರು. ಪುರಸಭಾ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಪ್ರಮುಖರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement