ತಾಲೂಕು ಮಟ್ಟದ ಕ್ರೀಡಾಕೂಟ: ವಿವೇಕಾನಂದ ಕಾಲೇಜಿಗೆ ಪ್ರಶಸ್ತಿ
ಕ.ಪ್ರ.ವಾರ್ತೆ , ಬೇಲೂರು , ಆ.30
ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಇಲ್ಲಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ವಿವೇಕಾನಂದ ಕಾಲೇಜಿನ ಕ್ರೀಡಾಪಟುಗಳು ಪ್ರಶಸ್ತಿ ಹಾಗೂ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿಜೇತರು: ಅನಿಲ್‌ಕುಮಾರ್ - ಉದ್ದ ಜಿಗಿತ, ಎತ್ತರ ಜಿಗಿತ, ಭರ್ಜಿ ಎಸೆತ ದಲ್ಲಿ ಪ್ರಥಮ ಸ್ಥಾನ ಪಡೆದು ವೈಯುಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ. ಗಣೇಶ್ -ತ್ರಿಬಲ್ ಜಂಪ್ ಪ್ರಥಮ, ಉದ್ದ ಜಿಗಿತ ದ್ವಿತಿಯ, ದರ್ಶನ್ - 400 ಮೀ ಓಟ ಪ್ರಥಮ, ಗುರುರಾಜ್ - 200 ಮೀ ಪ್ರಥಮ, ಪ್ರೇಮ್‌ಕುಮಾರ್ - ಎತ್ತರ ಜಿಗಿತ ದ್ವಿತೀಯ, ಚೇತನ - 500 ಮೀ ದ್ವಿತೀಯ, ಶ್ವೇತ - ಡಿಸ್ಕಸ್‌ಥ್ರೋದ್ವಿತೀಯ, ಬಾಲಕರ ಕಬಡ್ಡಿ ಪ್ರಥಮ ಸ್ಥಾನ, ಬಾಲಕರ ಬ್ಯಾಡ್‌ಮಿಂಟನ್ ಪ್ರಥಮ, ಬಾಲಕರ ಟೆನಿಕಾಯ್ಟ್ - ಪ್ರಥಮ, ಬಾಲಕಿಯರ ಟೆನಿಕಾಯ್ಟ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜೇತರಿಗೆ ಸಂಸ್ಥೆಯ ಕಾರ್ಯದರ್ಶಿ, ಪ್ರಾಂಶುಪಾಲ ಹಾಗೂ ಉಪನ್ಯಾಸಕರು, ಅಭಿನಂದನೆ ಸಲ್ಲಿಸಿದ್ದಾರೆ.