ವಿದ್ಯಾರಣ್ಯ ಪಬ್ಲಿಕ್ ಸ್ಕೂಲ್ನಲ್ಲಿ ಕೃಷ್ಣ-ರಾಧೆ ವೇಷಭೂಷಣ ಸ್ಪರ್ಧೆ
ಕಣಕಟ್ಟೆ (ಅರಸೀಕೆರೆ ತಾ): ಕಣಕಟ್ಟೆಯ ವಿದ್ಯಾರಣ್ಯ ವಿದ್ಯಾ ಸಂಸ್ಥೆಯ ವಿದ್ಯಾರಣ್ಯ ಪಬ್ಲಿಕ್ ಸ್ಕೂಲ್ನಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಕೃಷ್ಣ ಮತ್ತು ರಾಧೆ ವೇಷಭೂಷಣ ಸ್ಪರ್ಧೆಯನ್ನು ಪಬ್ಲಿಕ್ ಶಾಲೆಯ ಪುಟ್ಟ ಮಕ್ಕಳು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎ. ನಾಗೇಶರಾವ್ ಮಾತನಾಡಿ, ಕೃಷ್ಣನ ಬಾಲ್ಯ, ತುಂಟತನ, ದುಷ್ಟರ ಶಿಕ್ಷಣೆ ಮತ್ತು ಶಿಷ್ಟರ ರಕ್ಷಣೆ, ಮಹಾಭಾರತದಲ್ಲಿ ಮೂಡಿಬಂದಿರುವ ಪಾತ್ರಗಳ ಬಗ್ಗೆ ವಿವರಿಸಿದರು.
ಭಗವದ್ಗೀತೆಯಲ್ಲಿ ತಿಳಿಸಿರುವಂತೆ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂಬಂತೆ ಎಲ್ಲಾ ಕಾಲಘಟ್ಟಗಳಲ್ಲೂ ಅನಾಚಾರ ಹೆಚ್ಚಾದಾಗ ಭಗವಂತ ಯಾವ ರೂಪದಲ್ಲಾದರೂ ಉದಯಿಸುತ್ತಾನೆ. ಇಂದು ಪಾಶ್ಚಿಮಾತ್ಯರೂ ಇಸ್ಕಾನ್ನಂತಹ ಧಾರ್ಮಿಕ ಸಂಸ್ಥೆಗಳ ಮೂಲಕ ಕೃಷ್ಣ ಪ್ರಜ್ಞೆ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಅಶೋಕ್ಕುಮಾರ್ ಮಾತನಾಡಿ, ಕೃಷ್ಣನ ಹುಟ್ಟು, ಭಕ್ತರ ರಕ್ಷಣೆಗೆ ಗೋವರ್ಧನ ಗಿರಿ ಎತ್ತಿದ್ದು ಬಗ್ಗೆ ತಿಳಿಸಿದರು. ವಿದ್ಯಾರಣ್ಯ ಪ್ರೌಢಶಾಲೆಯ ಕನ್ನಡ ಶಿಕ್ಷಕ ಕೊಟ್ಟೂರಪ್ಪ ಮಾತನಾಡಿ, ಕೃಷ್ಣನು ಪೂತನಿ , ನರಕಾಸುರನನ್ನು ಸಂಹರಿಸಿದ ಪ್ರಕರಣ ವಿವರಿಸಿದರು.
ಕೃಷ್ಣ್ಣ ಮತ್ತು ರಾಧೆ ವೇಷಭೂಷಣ ಸ್ಪರ್ಧೆಯಲ್ಲಿ ವಿದ್ಯಾರಣ್ಯ ಪಬ್ಲಿಕ್ ಸ್ಕೂಲ್ನ ಚಂದನ್, ನಿಖಿಲ್, ಮೋನಿಷಾ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರು. ವಿಜೇತರಿಗೆ ಸುಮಾ ನಾಗೇಶ್ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ಸಿಬ್ಬಂದಿ ವರ್ಗದವರು ಇದ್ದರು. ನರ್ಸರಿ ಶಾಲೆಯ ಮುಖ್ಯ ಶಿಕ್ಷಕಿ ಸೂರ್ಯಪ್ರಭ ನಿರೂಪಿಸಿದರು.