ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸ್ವಸಹಾಯ ಸಂಘಗಳು ಆರ್ಥಿಕ ದಕ್ಷತೆ ಹೆಚ್ಚಿಸಿಕೊಳ್ಳಲು ಕರೆ

Vishwanath S
Updated On : 31 Aug 2013, 12:02 pm

ಕ.ಪ್ರ.ವಾರ್ತೆ , ಹಾಸನ , ಆ. 30
ನಿಸ್ವಾರ್ಥ ಮನೋಭಾವನೆಯೊಂದಿಗೆ ಸ್ವಸಹಾಯ ಸಂಘಗಳ ಬಗ್ಗೆ ಜಾಗೃತಿ ಮೂಡಿಸಿ ಆರ್ಥಿಕ ದಕ್ಷತೆ ಹೆಚ್ಚಿಸಿಕೊಂಡು ಸಮಾಜದ ಅಭಿವೃದ್ಧಿ ರಾಷ್ಟ್ರದ ಪ್ರಗತಿ ಬಗ್ಗೆ ಕಾರ್ಯ ಪ್ರವೃತ್ತ್ತರಾಗಬೇಕೆಂದು ವೈದ್ಯಾಧಿಕಾರಿ ಡಾ. ಪೂರ್ಣಿಮ ಕರೆ ನೀಡಿದ್ದಾರೆ.
ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಶೈಕ್ಷಣಿಕ ಪ್ರಗತಿಯ ಜೊತೆಗೆ ಸಮಾಜಸೇವೆ, ದುರ್ಬಲ ವರ್ಗದವರ ಬಗ್ಗೆ ಕಾಳಜಿ, ಸ್ವಾವಲಂಬತೆ, ಸ್ವದುಡಿಮೆಯ ಕಡೆಗೆ ಹೆಚ್ಚು ಆಸಕ್ತರಾಗಬೇಕೆಂದು ತಿಳಿಸಿದರು.
ಸ್ವಯಂಸೇವಕಿಯರು ಶಿಕ್ಷಣದ ಜೊತೆಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರಗತಿಯನ್ನು ಗುರ್ತಿಸಿಕೊಂಡು ಧೈರ್ಯ, ಸಾಹಸ, ಸ್ವಾವಲಂಬನೆಯೊಂದಿಗೆ ಪುರುಷ ಸಮಾನ ಹಕ್ಕು ಬಾಧ್ಯತೆಗಳಿಗೆ ಸದಾ ಜಾಗೃತರಾಗಬೇಕೆಂದು ಹೇಳಿದರು.
ಡಾ.ಸುಕನ್ಯಾಶೇಖರ್ ಮಾತನಾಡಿ, ರಾಷ್ಟ್ರೀಯ ಸೇವಾಯೋಜನೆ 1969 ರಿಂದ ಜಾರಿಯಲ್ಲಿದ್ದು ಯುವಶಕ್ತಿ  ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ತಿಳಿಸಿದರು.
ಪೊ.ಎಸ್.ಆರ್.ತಮ್ಮಯ್ಯ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದುದು ಎಂದರು. ಪ್ರಾಂಶುಪಾಲೆ  ಡಾ.ಜೆ.ಶೈಲಜಕುಮಾರಿ ಮಾತನಾಡಿ, ಸ್ವಯಂ ಸೇವಕಿಯರು ಸದಾ ಸ್ಫೂರ್ತಿ ಚೈತನ್ಯ ಮತ್ತು ಪ್ರಗತಿಶೀಲರಾಗಿ ಸಮಾಜದ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕೆಂದರು.
ಸ್ವಯಂ ಸೇವಕಿಯರು ರಾಷ್ಟ್ರೀಯ ಸೇವಾ ಯೋಜನೆಯ ಗೀತೆ ಹಾಡಿದರು. ನಿಸರ್ಗ ಸ್ವಾಗತಿಸಿದರು. ಮಾನಸ ವಂದಿಸಿದರು. ಶಾಹಿಸ್ತಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement