ಇಂದು ಕಣಿವೆ ಬಸವೇಶ್ವರ ಜಾತ್ರೆ
ರಾಮನಾಥಪುರ: ಐತಿಹಾಸಿಕ ಪ್ರಸಿದ್ಧ ಕಣಿವೆ ಬಸವೇಶ್ವರ ಸ್ವಾಮಿ 52ನೇ ಜಾತ್ರೆ ಡಿ.2ರಂದು ಜರುಗಲಿದೆ ಎಂದು ಮೇಲ್ವಿಚಾರಕ ಸಮೀಪದ ತೇಜೂರು ಗ್ರಾಮದ ಪುಟ್ಟರಾಜು ತಿಳಿಸಿದ್ದಾರೆ.
ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಬಸವೇಶ್ವರ ಮೂರ್ತಿಯು ಈ ಕಣಿವೆಯಲ್ಲಿ ಉದ್ಭವ ಮೂರ್ತಿ. ಈ ಬಾರಿ ಮಹದೇಶ್ವರ ದಯ ಬಾರದೆ ಹಾಡಿನ ಖ್ಯಾತಿಯ ರಾಜ್ಯ ಪ್ರಶಸ್ತಿ ವಿಜೇತ ಎಂ. ಮಹದೇವಸ್ವಾಮಿ ಮತ್ತು ತಂಡದವರಿಂದ ಬೆಳಗ್ಗೆ 12ಕ್ಕೆ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡು ಬಸವೇಶ್ವರ ಕೃಪೆಗೆ ಪಾತ್ರರಾಗುವಂತೆ ಕೋರಿದರು. ತೇಜೂರು ಗ್ರಾಮಸ್ಥರಾದ ಕೃಷ್ಣ, ಮಂಜೇಗೌಡ, ಜನಾರ್ದನ್, ಮೋಹನ್ಕುಮಾರ್, ನಿಂಗರಾಜು, ಲೋಕೇಶ, ನಾಗರಾಜು, ಪುಟ್ಟ ಇದ್ದರು.