ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಂದಾಯ, ಪೊಲೀಸ್ ಇಲಾಖೆ ದೌರ್ಜನ್ಯ; ರೈತ ಮುಖಂಡರ ಆರೋಪ

Rashmi Kasaragodu
Updated On : 1 Dec 2013, 11:59 am

ಬೇಲೂರು: ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ಕಟಾವು ಮಾಡಲು ಬಿಡದೆ ಸಾಗುವಳಿ ಮಾಡಿರುವ ಜಮೀನನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ತಾಲೂಕು ರೈತ ಸಂಘದ ಮುಖಂಡರು ದೂರಿದರು.
ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೋಗಮಲ್ಲೇಶ್, ಕಾರ್ಯದರ್ಶಿ ಸ್ವಾಮಿಗೌಡ ಮತ್ತು ಜಮೀನಿನ ರೈತರಾದ ಪರಮೇಶ್ವರಪ್ಪ, ನಿಂಗೇಗೌಡ ಶಿವರುದ್ರೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಹಳೇಬೀಡು ಹೋಬಳಿ ಹಕ್ಕಿಹಳ್ಳಿ ಗ್ರಾಮದ ಸರ್ವೆ ನಂ.63, 65, 66ರಲ್ಲಿ 1996ರಲ್ಲಿ ಬಗರ್ಹುಕುಂ ಸಾಗುವಳಿ ಮಾಡಿದ್ದು ಸಾಗುವಳಿ ಚೀಟಿ ಸಹ ದೊರೆತಿದೆ. ಆದರೆ ಏಕಾಏಕಿ ತಹಸೀಲ್ದಾರ್ ರವಿಚಂದ್ರ ನಾಯಕ್, ಹಳೇಬೀಡು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಕೂಡಲೇ ಜಮೀನು ತೆರವುಗೊಳಿಸುವಂತೆ ತಾಕೀತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಳೇಬೀಡು ಹೋಬಳಿ ಹಕ್ಕಿಹಳ್ಳಿ ಗ್ರಾಮದ ಶಿವರುದ್ರಗೌಡ, ಬಸವೇಗೌಡ, ಸಿದ್ದೇಗೌಡ, ಪರಮೇಶ್ವರಪ್ಪ, ಧರ್ಮೇಗೌಡ ಈ ಐದು ಜನರು 1978ರಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿಯಲ್ಲಿ ಜಮೀನಿಗೆ ಟಿಟಿ ದಂಡ ಕಟ್ಟಿ, ತಾಲೂಕು ಕಚೇರಿಯಿಂದ 1996ರಲ್ಲಿ ಅಧಿಕೃತವಾಗಿ ಸಾಗುವಳಿ ಚೀಟಿ ಪಡೆದು 25 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜಮೀನಿನಲ್ಲಿ ತೆಂಗು, ಶುಂಟಿ ಇನ್ನಿತರೆ ತರಕಾರಿ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ.
ಆದರೆ ಈ ಜಮೀನನ್ನು ಚಿಕ್ಕಮಗಳೂರು ಜಿಲ್ಲೆ ಕಡೂರು ಟೌನ್ ನಿವಾಸಿ ಹೇಮಶೇಖರ್ ತಮಗೆ ಖಾತೆಯಾಗಿದೆ, ಸಾಗುವಳಿ ಚೀಟಿ ನೀಡಿದ್ದಾರೆ ಎಂದು ಈ ಹಿಂದಿನ ತಹಸೀಲ್ದಾರ್ ರವಿಚಂದ್ರ ನಾಯಕ್ ಮತ್ತು ಹಳೇಬೀಡು ಪಿಎಸ್ಐ ಮಂಜುನಾಥ್ ನೆರವಿನೊಂದಿಗೆ ಬೀಗಿ ಪೊಲೀಸ್ನಿಂದ ಅ.11ರಂದು ಸ್ಥಳಕ್ಕೆ ಬಂದು ಈ ಜಮೀನಲ್ಲಿ ನಿಮಗೆ ಯಾವ ಅಧಿಕಾರವಿಲ್ಲ, ಬೆಳೆ ಕಟಾವು ಮಾಡದೆ ಕಡೂರು ಹೇಮಶೇಖರ್ಗೆ ಬಿಟ್ಟುಕೊಡಬೇಕು ಎಂದು ತಾಕೀತು ಮಾಡಿದ್ದರು ಎಂದರು.
ಜಮೀನಿನ ವಾರಸುದಾರ ಪರಮೇಶ್ವರಪ್ಪನ ಮಗ ಶಿವಕುಮಾರ್ ತಡೆಯಲು ಯತ್ನಿಸಿದ ತಕ್ಷಣ ಆತನಿಗೆ ಕೈಕೋಳ ಹಾಕಿ ಹಳೇಬೀಡು ಪೊಲೀಸ್ ಠಾಣೆ ಕರೆದು ತಂದರು. ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ. ಇವರ ವಿರುದ್ಧ ರಾಜ್ಯ ರೈತ ಸಂಘ ಉನ್ನತ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement