ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕನ್ನಡ ಕಥೆಗಳೇ ಹೆಚ್ಚು: ಡಾ. ಪ್ರಹ್ಲಾದ್

Rashmi Kasaragodu
Updated On : 1 Dec 2013, 11:52 am

ಹಾಸನ: ಅನ್ಯ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ರಚನೆಗೊಂಡಿರುವಂತಹ ಕಥೆಗಳು ಮೈಲಿಗಲ್ಲಿನಷ್ಟು ಸಾಧನೆ ಮಾಡಿವೆ ಎಂದು ಕಥೆಗಾರ ಡಾ. ಪ್ರಹ್ಲಾದ್ ಅಗಸನಕಟ್ಟೆ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಭಾನುವಾರ ನಡೆದ ಸಾಹಿತಿ ತಿರುಪತಿಹಳ್ಳಿ ಶಿವಶಂಕರಪ್ಪರ ವಾಡೆ ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಾವುದೇ ಕೃತಿಗಳು ರಚನೆಗೊಂಡರೆ ಅದರ ಮಂಡನೆ ಬಹಳ ಮುಖ್ಯ. ಜೊತೆಗೆ ಅದರ ಆಕೃತಿ, ಮುದ್ರಣ, ಪುಟ ವಿನ್ಯಾಸ ಬಹಳ ಮುಖ್ಯವಾಗುತ್ತದೆ. ಕನ್ನಡದಲ್ಲಿ ರಚನೆಯಾಗಿರುವಷ್ಟು ಕಥೆಗಳು ಇತರೆ ಭಾಷೆಗಳಲ್ಲಿ ರಚನೆಗೊಂಡಿಲ್ಲ ಎಂದರು.
ಕನ್ನಡದಲ್ಲಿ ಪ್ರಬುದ್ಧವಾದ, ಸಶಕ್ತವಾದ ಸಣ್ಣ ಕಥೆಗಳು ರಚನೆಗೊಂಡಿವೆ. ಕಥೆಗಾರ ತನ್ನ ಅನುಭವವನ್ನು ಹಾಗೂ ಜೀವನದಲ್ಲಿ ಕಂಡಿದ್ದನ್ನು ತಮ್ಮ ಕಥೆಯ ಮೂಲಕ ಹೊತ್ತಿಗೆಯಲ್ಲಿ ಇಳಿಸುತ್ತಾನೆ. ಸಣ್ಣ ಕಥೆಗಳು ಹೆಚ್ಚು ಆಕರ್ಷಣೀಯ ಹಾಗೂ ಸವಾಲುಗಳನ್ನು ಎದುರಿಸುತ್ತಿವೆ ಎಂದು ಹೇಳಿದರು. ಕಥೆಯಲ್ಲಿ ತಾನು ಕಂಡದ್ದನ್ನು, ಬೇರೆ ಬೇರೆಯ ಆಯಾಮಗಳನ್ನು, ಹಾಗೂ ಬೇರೆ ದೃಷ್ಟಿಕೋನಗಳನ್ನು ಹೊಂದಿರಬೇಕು. ಕಥೆಗಾರ ಹೇಳುವುದಿಲ್ಲ ಆತ ತೋರಿಸುವಂತಹದು. ಶಿವಶಂಕರಪ್ಪನವರು ತಮ್ಮ ಕೃತಿಯನ್ನು ಬಹಳ ಸುಂದರವಾಗಿ ರಚಿಸಿದ್ದಾರೆ. ಬೇರೆ ಕೃತಿಗಳಿಗಿಂತ ವಾಡೆ ಸಂಕಲನ ಸ್ವಲ್ವ ವಿಭಿನ್ನವಾಗಿದೆ. ಶಿವಶಂಕರಪ್ಪನವರು ಒಬ್ಬ ಉತ್ತಮ ಕಥೆಗಾರರಾಗಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಲೇಖಕ ಹಾಗೂ ಪ್ರಕಾಶಕ ವಸುಧೇಂದ್ರ, ಸಾಹಿತಿ ಹಾಗೂ ಉಪನ್ಯಾಸಕ ಡಾ. ಬಾಳಾ ಸಾಹೇಬ ಲೋಕಾಪುರ, ಸಾಹಿತಿ ಹಾಡ್ಲಹಳ್ಳಿ ನಾಗರಾಜು, ಕೃತಿಕಾರ ತಿರುಪತಿಹಳ್ಳಿ ಶಿವಶಂಕರಪ್ಪ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement