ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಬ್ಬು ಬೆಳೆಗಾರರ ಹಿತಾಸಕ್ತಿ ನಿರ್ವಹಣೆಗೆ ಕಬ್ಬು ನಿಯಂತ್ರಣ ಮಂಡಳಿ

Rashmi Kasaragodu
Updated On : 1 Dec 2013, 11:59 am

ಹಾಸನ: ಕಬ್ಬು ನಿಯಂತ್ರಣ ಮಂಡಳಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದ್ದು, ಅದರ ಕೆಂದ್ರ ಸ್ಥಾನವು ಬೆಂಗಳೂರಿನಲ್ಲಿದೆ.
ಸಕ್ಕರೆ ಖಾತೆ ಸಚಿವರು ಮಂಡಳಿಯ ಅಧ್ಯಕ್ಷರಾಗಿದ್ದು ಕೃಷಿ ಖಾತೆ ಸಚಿವರು ಸಹ ಅಧ್ಯಕ್ಷರು, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಅಥವಾ ಉಪ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ, ಕೃಷಿ ಆಯುಕ್ತರು, ಕಬ್ಬು ಬೆಳೆಗಾರರ 5 ಮಂದಿ ರೈತ ಪ್ರತಿನಿಧಿಗಳು, ಐವರು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಸದಸ್ಯರಾಗಿದ್ದು ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆಂದು ಸಣ್ಣ ಕೈಗಾರಿಕೆಗಳು ಮತ್ತು ಮುಜರಾಯಿ ಹಾಗೂ ಸಕ್ಕರೆ ಸಚಿವರು ಬಸವರಾಜ ಹೊರಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಕಬ್ಬು ನಿಯಂತ್ರಣ ಮಂಡಳಿಯು ಕರ್ನಾಟಕ ಕಬ್ಬು(ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ- 2013ರನ್ವಯ ಕಾರ್ಯ ನಿರ್ವಹಿಸುತ್ತಿದ್ದು ಕಾರ್ಖಾನೆಗಳ ಮಾಲೀಕರು ಮತ್ತು ಕಬ್ಬು ಬೆಳೆಗಾರರ ನಡುವೆ ಸೌಹಾರ್ದಯುತ ಸಂಬಂಧ ಕಾಪಾಡಿಕೊಂಡು ಬರುವ ಬಗ್ಗೆ ಶಿಫಾರಸುಗಳನ್ನು ನೀಡುವುದು, ಸರ್ಕಾರ ಅಥವಾ ಸಕ್ಕರೆ ಆಯುಕ್ತರು ಕಳುಹಿಸಿಕೊಟ್ಟ ಯಾವುದೇ ವಿಷಯ ಕುರಿತು ವಿಶೇಷವಾಗಿ ಕಬ್ಬು ಖರೀದಿಯ ವಿನಿಮಯ ಸಂಬಂಧ ಸಲಹೆ ನೀಡುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement