ಪೇದೆಗಳ ಮೇಲೆ ಹಲ್ಲೆ ಯತ್ನ; ಮೂವರ ಬಂಧನ
ಸಕಲೇಶಪುರ: ಗಲಭೆ ನಿಯಂತ್ರಣಕ್ಕೆ ತೆರಳಿದ್ದ ಪೊಲೀಸ್ ಪೇದೆಗಳ ಮೇಲೆ ಯುವಕರ ತಂಡವೊಂದು ಹಲ್ಲೆ ಮಾಡಲು ಮುಂದಾದ ಘಟನೆ ಶುಕ್ರವಾರ ರಾತ್ರಿ ಪಟ್ಟಣದ ಚಂಪಕನಗರದಲ್ಲಿ ನಡೆದಿದೆ.
ಪಾರ್ಟಿ ನಡೆಯುವ ಸಂದರ್ಭದಲ್ಲಿ ಗಲಭೆ ಆರಂಭವಾಗಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗಲಭೆ ನಿಯಂತ್ರಕ್ಕೆ ತೆರಳಿದ್ದ ಪಟ್ಟಣ ಪೊಲೀಸ್ ಠಾಣೆ ಪೇದೆಗಳ ಮೇಲೆ ಚಂಪಕನಗರ ಬಡಾವಣೆಯ ವಿಜಯ್, ಅವಿನಾಶ್, ಕಿರಣ್, ಸಂತೋಷ್, ಮೋಹನ್ ಹಾಗೂ ಗಾರ್ವೀನ್ ಎಂಬ ಯುವಕರ ತಂಡ ಹಲ್ಲೆಗೆ ಮುಂದಾಗಿದ್ದರು. ಮಧ್ಯೆ ಪ್ರವೇಶಿಸಿದ ಸ್ಥಳೀಯರು ಹಲ್ಲೆಯಿಂದ ಪೇದೆಗಳನ್ನು ರಕ್ಷಿಸಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.