ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೆದುಳಿನ ಯಶಸ್ವಿ ಚಿಕಿತ್ಸೆ

Rashmi Kasaragodu
Updated On : 1 Dec 2013, 11:59 am

ಹಾಸನ: ವ್ಯಕ್ತಿಯ ಮೆದುಳಿನಲ್ಲಿ ದ್ರವ ತುಂಬಿದ್ದ ಕೋಶವೊಂದನ್ನು ಪತ್ತೆ ಮಾಡಿ, ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯ ಡಾ. ಎಸ್. ಸತೀಶ್ ತಿಳಿಸಿದರು.
ಚನ್ನರಾಯಪಟ್ಟಣದ ನಿವಾಸಿ ರಂಗಸ್ವಾಮಿ(45) ಎಂಬವರ ಮೆದುಳಿನಲ್ಲಿ ದ್ರವ ತುಂಬಿದ ಕೋಶವೊಂದು ಪತ್ತೆ ಮಾಡಿದ ತಮ್ಮ ಆಸ್ಪತ್ರೆ ವೈದ್ಯರು ಸೂಕ್ತ ಸಮಯದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣವಾದ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೊಲಾಯ್ಡ್ ಕೋಶವು ಅಷ್ಟೇನು ಹಾನಿಕಾರವಲ್ಲದ ಗಡ್ಡೆಯಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದು ಹೇಳಿದರು.
ಬೆಳೆದ ಕೃತಕ ಕೋಶವು ಅವರ ನೆನಪಿನ ಕೋಶವನ್ನು ನೇರವಾಗಿ ಬಾಧೆಗೊಳಪಡಿಸಿತ್ತು. ಆದ್ದರಿಂದ ಕಾಲಕಾಲಕ್ಕೆ ಮರೆಗುಳಿತನ ಹಾಗೂ ದಿಗ್ಬ್ರಮೆ ಉಂಟಾಗುತ್ತಿತ್ತು. ಜೊತೆಗೆ ಇನ್ನಿತರ ಸಾಮಾನ್ಯ ಲಕ್ಷಣಗಳಾದ ತಲೆನೋವು, ಆಗಾಗ್ಗೆ ವಾಂತಿ ಮಾಡುವುದು ಮುಂತಾದವು ಗೋಚರಿಸುತ್ತಿರುತ್ತದೆ. ಇಂತಹ ಕಾಯಿಲೆಯನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement