ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈತರ ಚರ್ಚೆಗೆ ದನಿಗೂಡಿಸಿದ್ದೇನೆ: ಬಾಲಕೃಷ್ಣ

Rashmi Kasaragodu
Updated On : 1 Dec 2013, 11:59 am

ಚನ್ನರಾಯಪಟ್ಟಣ: ವಿಧಾನಸಭಾ ಅಧಿವೇಶನದಲ್ಲಿ ರೈತರ ಸಂಕಷ್ಟಗಳಿಗೆ ತಾವು ಚರ್ಚಿಸಿದ್ದಲ್ಲದೆ, ರೈತರ ಚರ್ಚೆಗೆ ಕೈ ಜೋಡಿಸಿದ್ದೇನೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸರ್ಕಾರದಿಂದ ಆರಂಭಿಸಿದ ಮೆಕ್ಕೆಜೋಳ ಖರೀದಿಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ರೈತರು ಬೆಳೆದ ಬೆಳೆಗೆ ನಿಖರವಾದ ಬೆಲೆ ಸಿಗದಿದ್ದಾಗ ಸರ್ಕಾರ ಬೆಂಬಲ ಬೆಲೆ ನೀಡಲು ಮುಂದಾಗಬೇಕು ಎಂದು ಸದನದಲ್ಲಿ ಒತ್ತಾಯಿಸಲಾಗಿದೆ ತಿಳಿಸಿದರು.
ಬಾಗೂರು ಏತ ನೀರಾವರಿ ಯೋಜನೆಯಿಂದ ಬಾಗೂರು ಕೆರೆಗೆ ಕಬ್ಬಿಣದ ಪೈಪ್ಲೈನ್ ಅಳವಡಿಸಲು ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು. ಸಂತೆ ಶಿವರ ಕೆರೆಗೆ ಶೇ.30ರಷ್ಟು ನೀರು ತುಂಬಿಸಿದ್ದು, ಮುಂದಿನ 20 ದಿನಗಳಲ್ಲಿ ಕೆರೆಗೆ ಶೇ.70ರಷ್ಟು ನೀರನ್ನು ತುಂಬಿಸಲಾಗುವುದು ಎಂದು ತಿಳಿಸಿದರು.
ಓಬಳಾಪುರ ಕೆರೆ ಅರ್ಧದಷ್ಟು ತುಂಬಿದ್ದು, ಹೆಗ್ಗಡಿಗೆರೆ ತುಂಬಿ ತೆಪ್ಪೋತ್ಸವ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಬಾಗೂರು ನವಿಲೆ ಏತ ನೀರಾವರಿ ಯೋಜನೆಯಡಿಯಲ್ಲಿ ಬರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನ ಹಿರೀಸಾವೆ ಬಸ್ ನಿಲ್ದಾಣ ಹಾಗೂ ನುಗ್ಗೇಹಳ್ಳಿ ಬಸ್ ನಿಲ್ದಾಣದ ಕಾಂಕ್ರಿಟ್ ಹಾಕಿಸುವುದು ಹಾಗೂ ಚನ್ನರಾಯಪಟ್ಟಣದ ರಾಜ್ಯ ಸಾರಿಗೆ ಬಸ್ ಡಿಪೋಗೆ ಹೆಚ್ಚುವರಿಯಾಗಿ ಬಸ್ಗಳನ್ನು ನೀಡುವುದು ಹಾಗೂ ಹಳೆ ಬಸ್ಗಳ ನಿರ್ಮಾಣಕ್ಕೆ ಒತ್ತಾಯಿಸಿದ ಸಂದರ್ಭದಲ್ಲಿ ಸಾರಿಗೆ ಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಮಾರುಕಟ್ಟೆ ಮಹಾಮಂಡಲದ ನಿರ್ದೇಶಕ ಮಂಜುನಾಥ್ ಮಾತನಾಡಿ, ರೈತರ ಸಂಕಷ್ಟಗಳನ್ನು ಅರಿತ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗಿದ್ದು, ರೈತರು ಉತ್ತಮ ಗುಣಮಟ್ಟದ ಮೆಕ್ಕೆಜೋಳವನ್ನು ನೀಡಬೇಕು ಎಂದು ತಿಳಿಸಿದರು.
ಎಪಿಸಿಎಂಸಿ ಅಧ್ಯಕ್ಷ ಅಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ತಿಮ್ಮೇಗೌಡ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಲ್ಲೇಶಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement