'ಅಧ್ಯಯನದ ಭವಿಷ್ಯದ ಚಿಂತನೆ ಮಾಡಿ'
ಹಾಸನ: ಅಧ್ಯಯನದ ಅವಧಿಯಲ್ಲಿಯೇ ಮುಂದಿನ ಭವಿಷ್ಯಕ್ಕಾಗಿ ಬೇಕಾದ ಎಲ್ಲಾ ಉದ್ಯೋಗ ಮಾಹಿತಿಗಳನ್ನು ಗ್ರಹಿಸುವ ಕಡೆ ಗಮನಹರಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ ಕೇಂದ್ರದ ನಿರ್ದೇಶಕ ವೆಂಕಟೇಶಪ್ಪ ತಿಳಿಸಿದ್ದಾರೆ. ನಗರದ ಎನ್.ಡಿ.ಆರ್.ಕೆ. ಕಾಲೇಜಿನಲ್ಲಿ ಸ್ನಾನಕೋತ್ತರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಉದ್ಯೋಗಕ್ಕಾಗಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಜಾಗರೂಕರಾಗಿರಬೇಕು. ಸಾಮಾನ್ಯ ಜ್ಞಾನ, ಕಂಪ್ಯೂಟರ್ ಜ್ಞಾನ ಮತ್ತು ಇಂಗ್ಲೀಷ್ ಸಂವಹನ ಕಲೆಗಳಲ್ಲಿ ಪರಿಣಿತಿಯನ್ನು ಪಡೆದಿರಬೇಕು ಎಂದರು.