ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಆಟೋ ಚಾಲಕರು ಸೇವಕರಲ್ಲ, ರಕ್ಷಕರು'

Rashmi Kasaragodu
Updated On : 2 Dec 2013, 11:14 am

ಸಕಲೇಶಪುರ: ಆಟೋ ಚಾಲಕರು ಸೇವಕರಲ್ಲ ರಕ್ಷಕರು ಎಂದು ಎಆರ್ಟಿಓ ಮೂಗಲವಳ್ಳಿ ಕೇಶವ ಧರಣಿ ಹೇಳಿದ್ದಾರೆ.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾಕಿ ಬಟ್ಟೆ, ಶ್ರಮಿಕರ ಹಾಗೂ ಸಮಾನತೆಯ ಕುರುಹಾಗಿದ್ದು,  ದಿನನಿತ್ಯ ಆಟೋ ಚಾಲಕರು ತಮ್ಮ ಕರ್ತವ್ಯದಲ್ಲಿ ಹತ್ತು ಹಲವು ಜನರ ಕಷ್ಟದಲ್ಲಿ ಭಾಗಿಯಾಗುತ್ತಿದ್ದು, ಬಹುತೇಕ ಉತ್ತಮ ನಡವಳಿಕೆ ಇರುವ ಆಟೋ ಚಾಲಕರಲ್ಲಿ ಜಾತಿ ಎಂಬುದಿಲ್ಲ ಎಂದರು.
ಪ್ರಾಮಾಣಿಕತೆಗೆ ಆಟೋ ಚಾಲಕರು ಹೆಸರಾಗಿದ್ದು ತಮ್ಮ ರಿಕ್ಷಾಗಳಲ್ಲಿ ಸಿಕ್ಕಿರುವ ಹಲವು ಅಮೂಲ್ಯ ವಸ್ತುಗಳನ್ನು ಹಿಂದಿರುಗಿಸಿದ ಉದಾಹರಣೆ ಹೇರಳವಾಗಿವೆ. ಇಂತಹ ಆಟೋ ಚಾಲಕರನ್ನು ಗುರುತಿಸಿ ಸನ್ಮಾನಿಸ ಕೆಲಸವನ್ನು ನಾಗರಿಕ ಸಮಾಜ ಮಾಡ ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಸಿ.ಪಿ ಧರ್ಮಯ್ಯ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಬೈಕೆರೆ ದೇವರಾಜ್, ಕಾರ್ಯದರ್ಶಿ ಮಕ್ಕಿಗಣೇಶ್, ಪುರಸಭೆ ಅಧ್ಯಕ್ಷ ಎಸ್.ಎನ್. ಸತೀಶ್, ಪುರಸಭೆ ಸದಸ್ಯ ಉಮೇಶ್, ಬಿಜೆಪಿ ಮುಖಂಡ ಜೈಮಾರುತಿ ದೇವರಾಜ್, ಕಾಂಗ್ರೆಸ್ ಅಧ್ಯಕ್ಷ ವಿದ್ಯಾಶಂಕರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement